ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ‘ಅವ್ವ’ ಪುಸ್ತಕ ಬಿಡುಗಡೆ

Last Updated 11 ಡಿಸೆಂಬರ್ 2021, 15:35 IST
ಅಕ್ಷರ ಗಾತ್ರ

ಬೀದರ್: ನಗರದ ಪ್ರಧಾನಮಂತ್ರಿ ಕೌಶಲ ಕೇಂದ್ರದಲ್ಲಿ ಡಾ. ವಿಷ್ಣು ಸೇನಾ ಸಮಿತಿ ವತಿಯಿಂದ ವಿ. ನಾಗೇಂದ್ರ ಪ್ರಸಾದ್ ಅವರ ಜನ್ಮದಿನದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೃತ್ಯುಂಜಯ ಹಿರೇಮಠ ರಚಿತ ‘ಅವ್ವ’ ಪುಸ್ತಕ ಬಿಡುಗಡೆ ಮಾಡಲಾಯಿತು.

ತಾಯಿ ಎಂದರೆ ಮಕ್ಕಳಿಗೆ ಪ್ರಪಂಚ. ತಾಯಿಯ ಆರೈಕೆ, ಪ್ರೀತಿ, ಮಮತೆ, ಶಿಕ್ಷಣ, ಸಂಸ್ಕಾರಕ್ಕೆ ಯಾವುದೂ ಸಾಟಿ ಇಲ್ಲ ಎಂದು ಪುಸ್ತಕ ಬಿಡುಗಡೆ ಮಾಡಿದ ಚಿಂತಕಿ ಡಾ. ಸುನಿತಾ ಕೂಡ್ಲಿಕರ್ ನುಡಿದರು.

ವಕೀಲೆ ಅನಿತಾ ಮೂಲಗೆ, ಯುವ ಮುಖಂಡ ಗುರುನಾಥ ರಾಜಗೀರಾ ಮಾತನಾಡಿದರು.

ವಿಷ್ಣು ಸೇನಾ ಸಮಿತಿ ಗೌರವಾಧ್ಯಕ್ಷ ವೀರೇಶ ಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಬಸವ ಮೂಲಗೆ, ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಿಕಾಂತ ಜ್ಯಾಂತೆ, ಸಾಹಿತಿ ಶಿವಲೀಲಾ ಬಂಡೆ, ಲಕ್ಷ್ಮಿ ಚಿಮಕೋಡೆ, ವಿನಯ ಜಿ.ಎಂ, ದಯಾನಂದ ಹಿರೇಮಠ, ಚಿತ್ರನಟ ಹಣ್ಮುಪಾಜಿ, ಸಂಗಮೇಶ, ಅಭಿಷೇಕ, ಜಗದೀಶ ನಂದಗಾವೆ, ಲಿಂಗಪ್ಪ ಮಡಿವಾಳ, ವಿಶಾಲ ನಾಯಕ್, ಆಕಾಶ ಮಮದಾಪುರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT