ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಕ್ರಾಂತಿ ಹರಿಕಾರ ಜಗಜೀವನರಾಮ್‌

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರಳ, ಸಾಂಕೇತಿಕವಾಗಿ ಜಯಂತಿ ಆಚರಣೆ
Published 6 ಏಪ್ರಿಲ್ 2024, 5:37 IST
Last Updated 6 ಏಪ್ರಿಲ್ 2024, 5:37 IST
ಅಕ್ಷರ ಗಾತ್ರ

ಬೀದರ್‌: ‘ದೇಶದ ಕೃಷಿಯಲ್ಲಿ ಬಹುದೊಡ್ಡ ಬದಲಾವಣೆ ತರುವ ಮೂಲಕ ‌ಹಸಿರು ಕ್ರಾಂತಿಯ ಹರಿಕಾರ ಎಂದೇ ಡಾ. ಬಾಬು ಜಗಜೀವನರಾಮ್‌ ಅವರು ಪ್ರಸಿದ್ದರಾದರು’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಡಾ. ಬಾಬು ಜಗಜೀವನರಾಮ್‌ ಅವರ 117 ನೇ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿ ಮಾತನಾಡಿದರು.

ಜಗಜೀವನರಾಮ್‌ ಅವರು ಈ ದೇಶಕ್ಕಾಗಿ ಶ್ರೇಷ್ಠ ಕೊಡುಗೆ ನೀಡಿದ್ದಾರೆ. ದೇಶದಲ್ಲಿ ಹಸಿರು ಕ್ರಾಂತಿ ತಂದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ನಮ್ಮ ದೇಶದ ಜನಸಂಖ್ಯೆ 30 ಕೋಟಿ ಇತ್ತು. ಇಂದು 140 ಕೋಟಿಗೆ ಏರಿಕೆ ಆಗಿದೆ. ಯಾರಿಗೂ ಆಹಾರದ ಸಮಸ್ಯೆಯಾಗಿಲ್ಲ. ಅದಕ್ಕೆ ಜಗಜೀವನರಾಮ್‌ ಅವರ ಮುಂದಾಲೋಚನೆ, ದೂರದೃಷ್ಟಿಯೇ ಕಾರಣ ಎಂದು ಹೇಳಿದರು.

ಜಿಲ್ಲಾ ‌ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, ಡಾ. ಬಾಬು ಜಗಜೀವನರಾಮ್‌ ಅವರಿಗೆ ನಮ್ಮ ದೇಶದ ಮುಂದಿನ ಭವಿಷ್ಯದ ಗುರಿ ಇತ್ತು. ಹಾಗಾಗಿ ಅವರು ದೇಶದಲ್ಲಿ ಆಹಾರದ ಕೊರತೆಯಾಗಬಾರದು ಎಂದು ಹಸಿರು ಕ್ರಾಂತಿಯನ್ನೆ ಮಾಡಿದರು. ದೇಶದಲ್ಲಿ ಇಂದು ಆಹಾರ ಸಮಸ್ಯೆಯಿಲ್ಲ ಎಂದು ಹೇಳಿದರು.

ಜಿಲ್ಲಾ ‌ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಮಾತನಾಡಿ, ಜಗಜೀವನರಾಮ್‌ ಅವರ ಜಯಂತಿಯ ದಿನವನ್ನು ಸಮತಾ ದಿನ ಎಂದು ಕರೆಯಲಾಗುತ್ತದೆ. ಇಂಡೋ- ಬಾಂಗ್ಲಾ ಯುದ್ಧ ಸಂದರ್ಭದಲ್ಲಿ ಜಗಜೀವನರಾಮ್‌ ಅವರು ರಕ್ಷಣಾ ಮಂತ್ರಿಯಾಗಿದ್ದರು. ಜತೆಗೆ ಹಸಿರು ಕ್ರಾಂತಿಯ ಹರಿಕಾರರೂ ಹೌದು ಎಂದು ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೂಜೆ ಸಲ್ಲಿಸಿದ ನಂತರ ಬೀದರ್‌ ನಗರದ ಹೈದರಾಬಾದ್‌ ರಸ್ತೆಯಲ್ಲಿರುವ ಡಾ. ಬಾಬು ಜಗಜೀವನರಾಮ್‌ ಅವರ ಪುತ್ಥಳಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇರಿದಂತೆ ಇತರೆ ಗಣ್ಯರು ಹೂಮಾಲೆ ಹಾಕಿ ಗೌರವ ಸಲ್ಲಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸಿಂಧು, ಮುಖಂಡರಾದ ಫರ್ನಾಂಡಿಸ್‌ ಹಿಪ್ಪಳಗಾಂವ, ಮಾರುತಿ ಬೌದ್ದೆ, ರಾಜು ಕಡ್ಯಾಳ, ಅಭಿ ಕಾಳೆ, ರೋಹಿದಾಸ ಘೋಡೆ, ಚಂದ್ರಕಾಂತ ಹಿಪ್ಪಳಗಾಂವ, ವಿಜಯಕುಮಾರ ಸೋನಾರೆ ಇತರರು ಹಾಜರಿದ್ದರು.

ಬಿಜೆಪಿ ಕಚೇರಿ: ನಗರದ ಬಿಜೆಪಿ ಕಚೇರಿಯಲ್ಲಿ ಡಾ.ಬಾಬು ಜಗಜೀವನರಾಮ್‌ ಅವರ ಜಯಂತಿ ಆಚರಿಸಲಾಯಿತು. ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಅವರು ಬಾಬು ಜಗಜೀವನರಾಮ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಮಾಡಿದರು. 

ಮುಖಂಡರಾದ ರಾಜಶೇಖರ ನಾಗಮೂರ್ತಿ, ಕಿರಣ ಪಾಟೀಲ, ಅರಹಂತ ಸಾವಳೆ, ಗಜೇಂದ್ರ ಕಾಮತಕರ್, ರಾಜಕುಮಾರ ನೆಮತಾಬಾದ್‌, ಉಪೇಂದ್ರ ದೇಶಪಾಂಡೆ, ರೇವಣಸಿದ್ದಪ್ಪ ಜಲಾದೆ, ನಿತಿನ್‌ ನವಲಕೇಲೆ, ಸ್ವಾಮಿದಾಸ ಕಪ್ಪನೂರ್, ಗುಂಡಪ್ಪ, ಜೇಮ್ಸ್‌ ಇಸ್ಲಾಂಪೂರ, ಸಂಜು ಕೋಳಾರ, ಸುರೇಶ ಸಮಿಲಾಪೂರ, ಸುಶೀಲ ಕೆಂಪನೋರ್, ಸಿದ್ದಪ್ಪ ಕಾಲೆಕರ್, ವಿಲ್ಸನ್ ಗುಮ್ಮೆ, ಜಾನ್ಸನ್, ವಿಜಯಕುಮಾರ ಸಿದ್ದಪ್ಪ, ರೋಹನ ಸಾಗರ, ಸುನೀಲ, ಮಾರುತಿ, ಶ್ಯಾಮವೆಲ್, ಸುಕೇಶ, ಅಭಿಷೇಕ ಮತ್ತಿತರರು ಹಾಜರಿದ್ದರು.

ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ನಲ್ಲಿ ಶುಕ್ರವಾರ ಬಾಬು ಜಗಜೀವನರಾಮ್‌ ಅವರ ಪುತ್ಥಳಿಗೆ ಗೌರವ ಸಮರ್ಪಿಸಿ ಮಾತನಾಡಿದರು
ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ನಲ್ಲಿ ಶುಕ್ರವಾರ ಬಾಬು ಜಗಜೀವನರಾಮ್‌ ಅವರ ಪುತ್ಥಳಿಗೆ ಗೌರವ ಸಮರ್ಪಿಸಿ ಮಾತನಾಡಿದರು

ಕೇಂದ್ರ ಸಚಿವರಿಂದ ಗೌರವ

ಕೇಂದ್ರ ಸಚಿವ ಭಗವಂತ ಖೂಬಾ ಅವರು ಬಾಬು ಜಗಜೀವನರಾಮ್‌ ಅವರ ಪುತ್ಥಳಿಗೆ ನಗರದಲ್ಲಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಿಹಾರದಲ್ಲಿ ಜನಿಸಿದ್ದ ಜಗಜೀವನರಾಮ್‌ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ್ದರು. ದೇಶಕ್ಕೆ ಅವರ ಕೊಡುಗೆ ಸ್ಮರಣೀಯ ಎಂದರು. ಫರ್ನಾಂಡಿಸ್ ಹಿಪ್ಪಳಗಾಂವ ದಯಾನಂದ ಕಮಲಾಕರ ಹೆಗಡೆ ಜಗನ್ನಾಥ ಬಿರಾದಾರ ಅವಿನಾಶ ಬುದ್ದಾಕರ ದತ್ತಾತ್ರಿ ಜ್ಯೋತಿ ವಿಜಯ ಸೂರ್ಯವಂಶಿ ಜೈಶೀಲ ಮೇತ್ರೆ ಓಂಕಾರ್ ನೂರ್ ರಮೇಶ ಕಟ್ಟಿತೂಗಾಂವ ಪೀಟರ್ ಶ್ರೀಮಂಡಲ ಪೀಟರ್ ಚಿಟಗುಪ್ಪ ವಿಜಯಕುಮಾರ ಹಿಪ್ಪಳಗಾಂವ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT