ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವ ಜಯಂತಿ: ವಚನಗಳಲ್ಲಿದೆ ಜೀವನದ ಮೌಲ್ಯ

ವಿವಿಧೆಡೆ ಸಂಭ್ರಮದಿಂದ ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವ
Published 11 ಮೇ 2024, 15:49 IST
Last Updated 11 ಮೇ 2024, 15:49 IST
ಅಕ್ಷರ ಗಾತ್ರ

ಬೀದರ್‌: ವಿವಿಧ ಸಂಘ ಸಂಸ್ಥೆಗಳಿಂದ ಶುಕ್ರವಾರ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಅದರ ವಿವರ ಇಂತಿದೆ.

ಚಿದ್ರಿ ಬುತ್ತಿ ಬಸವಣ್ಣ 24ನೇ ಜಾತ್ರೆ:

ಜಹೀರಾಬಾದ್‌ ಮಲ್ಲಯ್ಯಗಿರಿ ಆಶ್ರಮದ ಪೀಠಾಧಿಪತಿ ಬಸವಲಿಂಗ ಅವಧೂತರ ಸಾನ್ನಿಧ್ಯದಲ್ಲಿ ಜಾತ್ರಾ ಮಹೋತ್ಸವ ನಡೆಯಿತು. ‘ಬಸವಾದಿ ಶರಣರು ರಚಿಸಿದ ವಚನಗಳಲ್ಲಿ ಜೀವನದ ಮೌಲ್ಯ ಅಡಗಿದೆ. ವಚನಗಳನ್ನು ಅರಿತು ಮುನ್ನಡೆದವನೆ ಜೀವನದಲ್ಲಿ ಮುಕ್ತಿ ಪಡೆಯುತ್ತಾನೆ’ ಎಂದು ಹೇಳಿದರು.

ವಚನ ಸಾಹಿತ್ಯದ ಮೂಲಕ ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿದ ಮಹಾನ ಸಂತ ವಿಶ್ವಗುರು ಬಸವಣ್ಣ. ಬಸವಣ್ಣನವರು ನೊಂದವರ ಮತ್ತು ಜಾತಿ ವ್ಯವಸ್ಥೆ ವಿರುದ್ದ ಧ್ವನಿ ಎತ್ತಿದರು. ಅವರೊಬ್ಬ ಕ್ರಾಂತಿ ಪುರುಷ. ಎಲ್ಲರೂ ಬಸವಣ್ಣನವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.

ಬುತ್ತಿ ಬಸವಣ್ಣ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ರಮೇಶ ಮಾಶೆಟ್ಟೆ, ಕಾರ್ಯದರ್ಶಿ ಸಂಗಶೆಟ್ಟಿ ಸಿದ್ದೇಶ್ವರ, ವೀರಶೆಟ್ಟಿ ಮಾಶೆಟ್ಟಿ, ವಿನೋದ ಪಾಟೀಲ, ಬಸವರಾಜ ಮಸ್ತರ, ಕಲ್ಯಾಣರಾವ ಬಿರಾದಾರ, ರಾಜಕುಮಾರ ಬಿರಾದಾರ, ಸೋಮಶೇಖರ ಬಿರಾದಾರ, ಚಂದ್ರಕಾಂತ ಹುಮನಾಬಾದೆ, ಪತ್ರಕರ್ತ ನಾಗಶೆಟ್ಟಿ ಧರಂಪೂರ, ಅಮೃತರಾವ ಬಿರಾದಾರ, ಜಗನ್ನಾಥ ಬಿರಾದಾರ, ನಾರಾಯಣ ರೆಡ್ಡಿ, ಸಂದೀಪ ರೆಡ್ಡಿ ಮತ್ತಿತರರು ಹಾಜರಿದ್ದರು. ಇದಕ್ಕೂ ಮುನ್ನ ಬುತ್ತಿ ಬಸವಣ್ಣನಿಗೆ ಅವಧೂತರು ಪೂಜೆ ಸಲ್ಲಿಸಿ, ಲಕ್ಷದೀಪೊತ್ಸವಕ್ಕೆ ಚಾಲನೆ ನೀಡಿದರು.

ಕಲ್ಯಾಣ ನಗರ:

ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಮಂಗಲಾ ಚಿದ್ರಿ ಪೂಜೆ ಸಲ್ಲಿಸಿ, ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ, ಸಮಾನತೆ ಕಲ್ಪಿಸಿದವರು ಬಸವಣ್ಣನವರು. ಅನುಭವ ಮಂಟಪದಲ್ಲಿ ಅಕ್ಕ ಮಹಾದೇವಿ, ಸಂಕವ್ವ, ಬಾಳವ್ವ ಸೇರಿದಂತೆ ಅನೇಕ ವಚನಕಾರ್ತಿಯರು ಇದ್ದರು ಎಂದರು.

ಮಹಾನಂದ, ಮೀನಾಕ್ಷಿ, ಜಗದೇವಿ, ಜ್ಯೋತಿ, ಶಿವಲೀಲಾ, ಜಯಲಕ್ಷ್ಮಿ, ಕಾವೇರಿ, ಶೋಭಾ ಮುದ್ದಾಳೆ, ಸಂಗೀತ ಕಪಲಾಪೂರೆ, ಶೋಭಾ ಗಂಗು, ಚಿನ್ನಮ್ಮಾ, ಮಹಾದೇವಿ, ಕಾವೇರಿ ಮಿರಕಾಲೆ ಸೇರಿದಂತೆ ಇನ್ನಿತರರು ಹಾಜರಿದ್ದರು.

ಜಿಲ್ಲಾ ಜೆ.ಡಿ.ಎಸ್.ಕಚೇರಿ:

ನಗರದಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ, ಪಕ್ಷದ ಪರಿಶಿಷ್ಟ ಘಟಕದ ಅಧ್ಯಕ್ಷ ದೇವೇಂದ್ರ ಸೋನಿ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿದರು.

ಬೀದರ್‌ ಉತ್ತರ ಕ್ಷೇತ್ರದ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ಮಹಮ್ಮದ್‌ ಅಸಾದೊದ್ದಿನ್‌, ರಾಜಶೇಖರ ಜವಳೆ, ಸಂಗಮೇಶ ಚಿದ್ರಿ, ಪ್ರಶಾಂತ ವಿಶ್ವಕರ್ಮ, ಕೃಷ್ಣ ನಾಟೀಕರ, ಮಹಮ್ಮದ್‌ ಫಾರೂಕ್‌ ಅಲಿ ಮತ್ತಿತರರು ಪಾಲ್ಗೊಂಡಿದ್ದರು.

ಬೀದರ್‌ ಜಿಲ್ಲಾ ಜೆಡಿಎಸ್‌ ಕಚೇರಿಯಲ್ಲಿ ಶುಕ್ರವಾರ ಬಸವ ಜಯಂತಿ ಆಚರಿಸಲಾಯಿತು
ಬೀದರ್‌ ಜಿಲ್ಲಾ ಜೆಡಿಎಸ್‌ ಕಚೇರಿಯಲ್ಲಿ ಶುಕ್ರವಾರ ಬಸವ ಜಯಂತಿ ಆಚರಿಸಲಾಯಿತು
ಬೀದರ್‌ನ ಕಲ್ಯಾಣ ನಗರದ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತಿ ಆಚರಿಸಲಾಯಿತು
ಬೀದರ್‌ನ ಕಲ್ಯಾಣ ನಗರದ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತಿ ಆಚರಿಸಲಾಯಿತು
ಬೀದರ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಗಮನ ಸೆಳೆದ ಬಾಲ ಬಸವ
ಬೀದರ್‌ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಗಮನ ಸೆಳೆದ ಬಾಲ ಬಸವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT