ಸೋಮವಾರ, ಜನವರಿ 20, 2020
18 °C

ಮಕ್ಕಳಿಂದ ಜಾಗೃತಿ ರ್‍ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ವಿವಿಧ ಶಾಲಾ ಮಕ್ಕಳಿಂದ ನಗರದಲ್ಲಿ ಶನಿವಾರ ‘ಬೇಟಿ ಬಚಾವೋ ಬೇಟಿ ಪಢಾವೋ’ ಜಾಗೃತಿ ರ್‍ಯಾಲಿ ನಡೆಯಿತು.

ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಪ್ರೇಮಾವತಿ ಮನಗೂಳಿ ರ್‍ಯಾಲಿಗೆ ಚಾಲನೆ ನೀಡಿದರು.

ರ್‍ಯಾಲಿಯು ಭಗತ್‌ಸಿಂಗ್‌ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತ, ಜನರಲ್‌ ಕಾರ್ಯಪ್ಪ ವೃತ್ತದ ಮಾರ್ಗವಾಗಿ ಜಿಲ್ಲಾ ರಂಗ ಮಂದಿರ ತಲುಪಿತು. ಮಕ್ಕಳು ಪೋಸ್ಟರ್‌ಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.

ಬಸವ ತತ್ವ ಶಿಕ್ಷಣ ಸಂಸ್ಥೆಯ ಶ್ರೀಮತಿ ಲಕ್ಷ್ಮೀಬಾಯಿ ಕಮಠಾಣೆ ಕನ್ಯಾ ಪ್ರೌಢ ಶಾಲೆ, ಸರಸ್ವತಿ ಶಾಲೆ, ಸಾಯಿ ಆದರ್ಶ ಶಾಲೆ, ದತ್ತಗಿರಿ ಮಹಾರಾಜ್ ಪಬ್ಲಿಕ್‌ ಶಾಲೆ, ಗುರುನಾನಕ ಪಬ್ಲಿಕ್‌ ಸ್ಕೂಲ್ ಸೇರಿದಂತೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕರು, ವಕೀಲರು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು