ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾಲ್ಕಿ | ಕಳ್ಳರ ಬಂಧನ: 16 ಬೈಕ್‌ ವಶಕ್ಕೆ

Published : 18 ಆಗಸ್ಟ್ 2024, 14:02 IST
Last Updated : 18 ಆಗಸ್ಟ್ 2024, 14:02 IST
ಫಾಲೋ ಮಾಡಿ
Comments

ಭಾಲ್ಕಿ: ತಾಲ್ಲೂಕಿನ ಧನ್ನೂರ (ಎಚ್) ಠಾಣೆಯ ಪೊಲೀಸರು ಮೂವರು ಬೈಕ್ ಕಳ್ಳರನ್ನು ಬಂಧಿಸಿ ₹9.15 ಲಕ್ಷ ಮೌಲ್ಯದ 16 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಇನ್ನೂ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಪತ್ತೆ ಕಾರ್ಯ ಪ್ರಗತಿಯಲ್ಲಿದೆ.

ಸಂದೀಪ ಬಸವರಾಜ ಮಳಜಾಪೂರೆ, ಬಳತ (ಬಿ), ಲೆಕ್ಚರರ್ ಕಾಲೊನಿ ಭಾಲ್ಕಿ, ನಾಗೇಶ ಕಲ್ಯಾಣರಾವ್ ಮೈಬತೆ ಸಿದ್ದೇಶ್ವರ, ಸೋಹಲ್ ಫಯಾಜೋದ್ದಿನ್ ಮುಲ್ಲಾ ಡೋಣಗಾಪೂರ ಬಂಧಿತ ಆರೋಪಿಗಳು. ಆರೋಪಿಗಳು ನೆರೆಯ ಮಹಾರಾಷ್ಟ್ರ ರಾಜ್ಯದ ಶಾಜಾನಿ ಔರಾದ್‌ನಲ್ಲಿ 4 ಮೋಟಾರ್ ವಾಹನಗಳು ಹಾಗೂ ಇತರೆಡೆ ಕಳುವಾದ 11 ಬೈಕ್‌ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

ವಿವರ: ಧನ್ನೂರ (ಎಚ್) ಪೊಲೀಸ್ ಠಾಣೆ ವ್ಯಾಪ್ತಿಯ ಕಟ್ಟಿತುಗಾಂವ ಗ್ರಾಮದಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲಿ ಮನೆಯ ಮುಂದೆ ನಿಲ್ಲಿಸಿದ ಬೈಕ್‌ ಕಳವು ಮಾಡಿರುವ ಬಗ್ಗೆ ಗ್ರಾಮದ ಸಂತೋಷ ಮಹಾಂತಪ್ಪ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು. ತನಿಖೆಯ ಬಳಿಕ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಳವು ಮಾಡಿದ ಬೈಕ್‍ಗಳನ್ನು ಆರೋಪಿಗಳು  ಠಾಣೆಗೆ ಒಪ್ಪಿಸಿದ್ದಾರೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಧನ್ನೂರ(ಎಚ್) ಪೊಲೀಸ್ ಠಾಣೆಯ ಪಿಎಸ್‍ಐ ವಿಶ್ವಾರಾಧ್ಯ ನೇತೃತ್ವದಲ್ಲಿ ಪ್ರಕರಣ ಭೇದಿಸಲಾಗಿದೆ. ವೀರಶೆಟ್ಟಿ ಪಾಟೀಲ, ಎಎಸ್‍ಐ ವಿಠಲರಾವ್, ಸಿಎಚ್‍ಸಿ ಉಮಾಕಾಂತ ದಾನಾ, ನಾಗಪ್ಪ, ಬಕ್ಕಯ್ಯಾ, ಭಗವಾನ, ಸಂಜೀವ ಸಿರ್ಸೆ, ಸಿಪಿಸಿ ಹರ್ಷವರ್ಧನ, ನಾಗರಾಜ, ಸಿದ್ದಲಿಂಗಪ್ಪ, ಪ್ರಶಾಂತ ರೆಡ್ಡಿ, ರವಿಕುಮಾರ, ನಾಗರಾಜ, ಗುರುರಾಜ, ಬಸಪ್ಪ, ಮಹಾದೇವ, ಎಪಿಸಿ ಜಗದೀಶ ಮಾನಶೆಟ್ಟಿ, ತಾನಾಜಿಯನ್ನು ಒಳಗೊಂಡ ಪೊಲೀಸ್ ತಂಡ ಯಶಸ್ವಿಯಾಗಿದೆ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿಗಳು, ಸಿಬ್ಬಂದಿ ವರ್ಗದವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟೆ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣನವರ, ಚಂದ್ರಕಾಂತ ಪೂಜಾರಿ ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT