ಹೆಸರು: ಡಾ.ಭೀಮಣ್ಣ ಖಂಡ್ರೆ

ತಂದೆ ಹೆಸರು: ಶಿವಲಿಂಗಪ್ಪ ಖಂಡ್ರೆ

ತಾಯಿ ಹೆಸರು: ಪಾರ್ವತಿಬಾಯಿ

ವಯಸ್ಸು: 102

ವಿದ್ಯಾರ್ಹತೆ: ಬಿಎ, ಎಲ್ಎಲ್ಬಿ

ಪತ್ನಿ ಹೆಸರು: ಲಕ್ಷ್ಮೀಬಾಯಿ ಖಂಡ್ರೆ

ಮಕ್ಕಳು: ಐವರು ಪುತ್ರಿಯರು, ಮೂವರು ಪುತ್ರರು

ರಾಜಕೀಯ ಪ್ರವೇಶ: 1949-50

ಪುರಸಭೆ ಅಧ್ಯಕ್ಷರಾಗಿ ಆಯ್ಕೆ : 1953ರಲ್ಲಿ ಭಾಲ್ಕಿ ಪುರಸಭೆಯ ಪ್ರಥಮ ಅಧ್ಯಕ್ಷರಾಗಿ ಆಯ್ಕೆ

ಶಾಸಕರಾಗಿ ಆಯ್ಕೆ: ನಾಲ್ಕು ಅವಧಿ ಶಾಸಕರಾಗಿ ಆಯ್ಕೆ (1962, 1967, 1978, 1983 ಕ್ಷೇತ್ರದ ಶಾಸಕರಾಗಿ ಸೇವೆ)

ವಿಧಾನ ಪರಿಷತ್ಗೆ ಆಯ್ಕೆ : ಎರಡು ಅವಧಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ (1988, 1994ರಲ್ಲಿ ಸತತ ಎರಡು ಅವಧಿಗೆ ವಿಧಾನ ಪರಿಷತ್ತು ಸದಸ್ಯರಾಗಿ ಆಯ್ಕೆ)

ಸಚಿವರಾಗಿ ಸೇವೆ : 1992-1994ರಲ್ಲಿ ಎಂ.ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಸೇವೆ

ಸಹಕಾರ ರಂಗದಲ್ಲಿ ಸೇವೆ : ಏಪ್ರಿಲ್ 2, 1969 ರಿಂದ ಮಾರ್ಚ್ 27, 1984ರ ವರೆಗೆ ಬಿಎಸ್ಎಸ್ಕೆ, ಎಂಜಿಎಸ್ಎಸ್ಕೆ ಅಧ್ಯಕ್ಷರಾಗಿ ಸೇವೆ

ಶೈಕ್ಷಣಿಕ ಸೇವೆ : 1963 ರಿಂದ 30 ವರ್ಷಗಳ ಕಾಲ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ ಸೇವೆ

ಮಹಾಸಭೆಗೆ ಆಯ್ಕೆ : 1999, 2005ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ, ಪ್ರಸ್ತುತ ಗೌರವಾಧ್ಯಕ್ಷರಾಗಿ ಸೇವೆ

ಖಂಡ್ರೆಗೆ ಸಂದ ಪ್ರಶಸ್ತಿಗಳು

ಭೀಮಣ್ಣ ಖಂಡ್ರೆ ಅವರು ಬೀದರ್ ಜಿಲ್ಲೆಯ ಹಿರಿಯ ನಾಯಕರಾಗಿದ್ದರೂ ರಾಜ್ಯ ರಾಜಕಾರಣದಲ್ಲಿ ಹೆಸರು ಮಾಡಿರುವ ಅಪರೂಪದ ಗಣ್ಯವ್ಯಕ್ತಿಗಳಾಗಿದ್ದಾರೆ.

ಬಸವನಿಷ್ಠೆ, ಹಠಮಾರಿ ಸ್ವಭಾವದಿಂದಾಗಿ, ವೈಯಕ್ತಿಕವಾಗಿ ಅವರು ಬಹಳಷ್ಟು ಕಳೆದುಕೊಂಡಿದ್ದಾರೆ. ಸಭ್ಯ ಸುಸಂಸ್ಕೃತ ವ್ಯಕ್ತಿತ್ವದ ಪ್ರಭಾವಳಿ, ದೇಶಿ ಆಹಾರ ಪದ್ಧತಿ, ಉಡುಗೆ-ತೊಡಿಗೆಯನ್ನು ರೂಢಿಸಿಕೊಂಡು ಮಾದರಿಯಾಗಿದ್ದಾರೆ. ಬ್ರಿಟಿಷರ ಕುತಂತ್ರ ಹಾಗೂ ನಿಜಾಮರ ಪಕ್ಷಪಾತ ಆಡಳಿತದ ವಿರುದ್ಧ ಬಂಡಾಯ, ಸ್ವಾತಂತ್ರ್ಯದ ಕಹಳೆ ಊದಿದ್ದಕ್ಕಾಗಿ ಜೈಲಿಗೂ ಹೋಗಿ ಬಂದವರಾಗಿದ್ದಾರೆ. ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಿಗೆ ತಮ್ಮದೆ ಆದ ವಿಶಿಷ್ಟ ಕೊಡುಗೆಯನ್ನು ಕೊಟ್ಟಿದ್ದಾರೆ.

ಭೀಮಣ್ಣ ಖಂಡ್ರೆಯವರ ಸಾರ್ಥಕ ಸೇವೆ, ಜೀವನ ಸಿದ್ಧಾಂತಗಳನ್ನು ಪರಿಗಣಿಸಿ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಕೃಷಿ ಅಧ್ಯಯನಕ್ಕಾಗಿ ಸಕ್ಕರೆ ಕಣಜವಾಗಿದ್ದ ಕೋರಿಯಾ ಪ್ರವಾಸವನ್ನು ಮುಗಿಸಿ ಬಂದಾಗ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ವತಿಯಿಂದ 1981ರ ಸೆಪ್ಟೆಂಬರ್ 10ರಂದು ಭಾಲ್ಕಿಯ ಚನ್ನಬಸವೇಶ್ವರ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಕರ್ನಾಟಕ ಸರ್ಕಾರವು 2006ರ ನವೆಂಬರ್ 1ರಂದು ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ನೀಡಿದೆ. ಆ ಸಂದರ್ಭದಲ್ಲಿ ಖಂಡ್ರೆಯವರಿಗೆ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಬೀದರನ ಅಕ್ಕಮಹಾದೇವಿ ಮಹಿಳಾ ಕಾಲೇಜಿನಲ್ಲಿ ಭವ್ಯವಾದ ಅಭಿನಂದನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಪ್ರಭುರಾವ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನವು ಖಂಡ್ರೆಯವರ ಸೇವೆಯನ್ನು ಗಮನಿಸಿ ‘ಕನ್ನಡದ ಕಣ್ಮಣಿ ಪ್ರಭುರಾವ ಕಂಬಳಿವಾಲೆ’ ಪ್ರಶಸ್ತಿಯನ್ನು 2011ರ ಮೇ 15ರಂದು ಪ್ರದಾನ ಮಾಡಿತು.

ಭೀಮಣ್ಣ ಖಂಡ್ರೆಯವರ ಜೀವಿತಾವಧಿಯ ಜನಸೇವೆಗಾಗಿ ಗುಲಬರ್ಗಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಆಗ ಭಾಲ್ಕಿಯ ಬಿಕೆಐಟಿಯಲ್ಲಿ ಅದ್ದೂರಿ ಸಮಾರಂಭ ಏರ್ಪಡಿಸಿ ಅಭಿನಂದಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.