ಕಮಲನಗರ: ತಾಲ್ಲೂಕಿನ ಸೋನಾಳ ಗ್ರಾಮದಲ್ಲಿ ಲಿಂ.ಮ.ನಿ.ಪ್ರ ನಿರಂಜನ ಮಹಾಸ್ವಾಮಿಗಳ 14ನೇ ಪುಣ್ಯ ಸ್ಮರಣೋತ್ಸವದ ನಿಮಿತ್ತ ಮಠದಿಂದ ಬುಧವಾರ ಮಧ್ಯಾಹ್ನ 3 ಗಂಟೆಗೆ ಸ್ವಾಮೀಜಿಗಳ ಭಾವಚಿತ್ರ ಹಾಗೂ ಮಠದ ಪೀಠಾಧೀಪತಿ ಚನ್ನವೀರ ಮಹಾಸ್ವಾಮಿಗಳ ಮೆರವಣಿಗೆ ನಡೆಯಿತು.

ಮೆರವಣಿಗೆಯು ಗ್ರಾಮದ ಮುಖ್ಯ ಬೀದಿಗಳಿಂದ ಹನುಮಾನ ಮಂದಿರದ ತನಕ ಸಾಗಿ, ಕಮಲನಗರ ಮುಖ್ಯ ರಸ್ತೆಯಲ್ಲಿರುವ ಗುರು ನಿರಂಜನ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಗುರುನಿರಂಜನ ಮಹಾಸ್ವಾಮಿಗಳ ಮೂರ್ತಿಯವರೆಗೆ ಬಾಜಾ, ಭಜಂತ್ರಿಯೊಂದಿಗೆ ಸಾಗಿತು.

ಮಹಿಳೆಯರು ಕಳಸ ಹೊತ್ತು ಸಾಗಿದರು. ಹೂವಿನಸಿಗ್ಲಿ, ನಾಗೂರ(ಬಿ), ಶಿವಣಿ, ಮದನೂರ, ಸೋನಾಳ, ಏಲವೀಗಿ, ಹಂಗರಗಾ ಗ್ರಾಮದ ಮೇಳದವರ ಭಜನೆ ಹಾಗೂ ಗುರು ನಿರಂಜನ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.