ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ -19 | ಗಾಂಧಿಗಂಜ್ ವ್ಯಾಪಾರಿಗಳಿಂದ ದೇಣಿಗೆ

Last Updated 17 ಮೇ 2020, 13:27 IST
ಅಕ್ಷರ ಗಾತ್ರ

ಬೀದರ್: ಮುಖ್ಯಮಂತ್ರಿ ಕೋವಿಡ್ -19 ಪರಿಹಾರ ನಿಧಿಗೆ ಇಲ್ಲಿಯ ಗಾಂಧಿಗಂಜ್‍ನ ವ್ಯಾಪಾರಿಗಳು ₹ 2,35,100 ದೇಣಿಗೆ ನೀಡಿದ್ದಾರೆ.

ಗಾಂಧಿಗಂಜ್‍ನ ದಿ.ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಬಸವರಾಜ ಧನ್ನೂರ ಅವರು ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಅವರಿಗೆ ಡಿ.ಡಿ ಹಸ್ತಾಂತರಿಸಿದರು.

ಕೋವಿಡ್ 19 ತಡೆ ಕಾರ್ಯಗಳಿಗೆ ಸಂಘ ಸಂಸ್ಥೆಗಳು ಹಾಗೂ ದಾನಿಗಳು ನೆರವಾಗಬೇಕು ಎನ್ನುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನವಿಗೆ ಸ್ಪಂದಿಸಿ ಗಾಂಧಿಗಂಜ್ ವ್ಯಾಪಾರಿಗಳು ದೇಣಿಗೆ ನೀಡಿದ್ದಾರೆ ಎಂದು ಬಸವರಾಜ ಧನ್ನೂರ ತಿಳಿಸಿದರು.

ಗಾಂಧಿಗಂಜ್ ವ್ಯಾಪಾರಿಗಳು ಹಿಂದಿನಿಂದಲೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜ ಹಾಗೂ ದೇಶದ ಕಾರ್ಯಗಳಿಗೆ ಸದಾ ಉದಾರ ಮನಸ್ಸಿನಿಂದ ದೇಣಿಗೆ ಕೊಡುತ್ತ ಬಂದಿದ್ದಾರೆ. ಇದೀಗ ಕೋವಿಡ್ 19 ಸೋಂಕು ತಡೆ ಕಾರ್ಯಕ್ಕೂ ಕೈಜೋಡಿಸಿದ್ದಾರೆ ಎಂದು ಹೇಳಿದರು.

ಕೋವಿಡ್ 19 ಸೋಂಕಿನಿಂದ ಲಾಕ್‍ಡೌನ್ ಮಾಡಿದ ಸಂದರ್ಭದಲ್ಲಿ ಸೋಂಕು ಹರಡುವಿಕೆ ಭೀತಿಯ ನಡುವೆಯೂ ಗಾಂಧಿಗಂಜ್ ವ್ಯಾಪಾರಿಗಳು ಸರ್ಕಾರದ ಆದೇಶದಂತೆ ವ್ಯಾಪಾರ ವಹಿವಾಟು ನಡೆಸುವ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಿದ್ದರು ಎಂದು ಸ್ಮರಿಸಿದರು.

ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಭಗವಂತ ಔದತ್‍ಪುರ, ಕಾರ್ಯಕಾರಿಣಿ ಸದಸ್ಯ ಸೋಮನಾಥ ಗಂಗಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT