ಭಾನುವಾರ, ಸೆಪ್ಟೆಂಬರ್ 25, 2022
30 °C

ದಾಸೋಹ ತತ್ವದಿಂದ ಕಾರ್ಯನಿರ್ವಹಿಸಿ: ಗುರುಬಸವ ಪಟ್ಟದ್ದೇವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ‘ಲಿಂಗಾಯತ ನೌಕರರು ಸದಾ ಕಾಯಕ, ದಾಸೋಹ ತತ್ವದಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.

ಪಟ್ಟಣದ ಬಾಲಾಜಿ ಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ಲಿಂಗಾಯತ ನೌಕರರ ಸಂಘದ 3ನೇ ವಾರ್ಷಿಕ ಮಹಾಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಂಘಟನೆಯಲ್ಲಿ ಶಕ್ತಿ ಇದೆ ಎಂದರು. ಲಿಂಗಾಯತ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವರಾಜ ಕಪಲಾಪುರೆ, ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಬಡದಾಳೆ ಹಾಗೂ ಮಲ್ಲಿಕಾರ್ಜುನ ಪಾಟೀಲ ಮಾತನಾಡಿದರು.

ಮಲ್ಲಿಕಾರ್ಜುನ ಹಲ್ಮಂಡಗೆ, ನಾಗಭೂಷಣ ಮಾಮಡಿ, ರಾಜೆಪ್ಪ ಪಾಟೀಲ, ಸೂರ್ಯಕಾಂತ ಸುಂಟೆ, ಅಶೋಕ ತಂಬೋಳೆ, ಸುನಿಲ್‌ ಬಿರಾದಾರ, ಚಂದ್ರಕಾಂತ ಬಿರಾದಾರ, ಮಲ್ಲಮ್ಮಾ ಆರ್. ಪಾಟೀಲ, ಕೀರ್ತಿಲತಾ ಹೋಸಾಳೆ ಸೇರಿದಂತೆ 2022ನೇ ಸಾಲಿನಲ್ಲಿ ನಿವೃತ್ತರಾದ, ಪದೋನ್ನತಿ ಹೊಂದಿದ, ನೂತನವಾಗಿ ಆಯ್ಕೆಯಾದ ಇಸಿಒ, ಸಿಆರ್‌ಪಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಶರಣಪ್ಪ, ಮಲ್ಲಿನಾಥ, ಶಿವಕುಮಾರ, ಶಶಿಧರ ಕೊಸಂಬೆ ಹಾಗೂ ಸೋಮನಾಥ ಗೋರ್ಟಾ ಇದ್ದರು. ಸುನಿತಾ ಮಮ್ಮ ವಚನಗೀತೆ ಹಾಡಿದರು. ಬಸವರಾಜ ದಾನಾ ಸ್ವಾಗತಿಸಿದರು. ಸಂತೋಷ ವಾಡೆ ನಿರೂಪಿಸಿದರು. ಬಾಲಾಜಿ ಬೈರಾಗಿ ವಂದಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು