ಬುಧವಾರ, ಜುಲೈ 28, 2021
21 °C

ಬಸವಕಲ್ಯಾಣ: ಸಂಭ್ರಮದ ಕಾರಹುಣ್ಣಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಶುಕ್ರವಾರ ರೈತರ ಮುಂಗಾರಿನ ಹಬ್ಬವಾದ ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಿ  ಜಾನುವಾರುಗಳ ಪೂಜೆ ಸಲ್ಲಿಸಲಾಯಿತು.

ಎತ್ತುಗಳ ಮೈ ತೊಳೆದು ಅವುಗಳ ಕೋಡುಗಳಿಗೆ ಬಣ್ಣ ಹಚ್ಚಿ, ಮತಾಟಿ, ಮಗಡಾ, ಕೋಡುಬಳೆ, ಕೊರಳಪಟ್ಟಿ, ಗಂಟೆಸರ ಕಟ್ಟಿ ಮೈಮೇಲೆ ಝೂಲಾ ಹಾಕಿ ನಂತರ ರೈತರು ಕುಟುಂಬ ಸಮೇತರಾಗಿ ಅವುಗಳಿಗೆ ಪೂಜೆ ಸಲ್ಲಿಸಿ, ನೈವೇದ್ಯ
ತಿನ್ನಿಸಿದರು.

ಮನೆಯಲ್ಲಿ ಸಿಹಿ ಖಾದ್ಯಗಳ ಊಟ ಸವಿದರು. ಸಂಜೆ ಊರ ಅಗಸೆಗಳಲ್ಲಿ ಎಲ್ಲರ ಎತ್ತುಗಳನ್ನು ತಂದು ನಿಲ್ಲಿಸಿ ಓಡಿಸುವ ಸ್ಪರ್ಧೆಯೂ
ನಡೆಯಿತು.

`ಕೊರೊನಾ ಲಾಕ್‌ಡೌನ್ ಮಧ್ಯೆ ರೈತರು ಹೊಲದ ಎಲ್ಲ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿದ್ದಾರೆ. ಎರಡು ದಿನಗಳ ಹಿಂದೆ ಮಳೆಯೂ ಸರಿಯಾಗಿ ಬಿದ್ದಿದೆ. ಆದ್ದರಿಂದ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದು, ಕೆಲ ದಿನಗಳ ನಂತರ ರೈತರು ಬಿತ್ತನೆ ಆರಂಭಿಸುವ ಧಾವಂತದಲ್ಲಿದ್ದಾರೆ' ಎಂದು ಮಲ್ಲಿಕಾರ್ಜುನವಾಡಿಯ ಪ್ರವೀಣಕುಮಾರ ಪುಣೆ ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು