ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಲೋಕಸಭಾ ಕ್ಷೇತ್ರ: ಏಳು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Published 16 ಏಪ್ರಿಲ್ 2024, 16:08 IST
Last Updated 16 ಏಪ್ರಿಲ್ 2024, 16:08 IST
ಅಕ್ಷರ ಗಾತ್ರ

ಬೀದರ್‌: ಬೀದರ್‌ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮಂಗಳವಾರ ಏಳು ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದರು.

ಕಾಂಗ್ರೆಸ್‌ನಿಂದ ಸಾಗರ್‌ ಖಂಡ್ರೆ, ಬಹುಜನ ಸಮಾಜ ಪಕ್ಷದಿಂದ (ಬಿಎಸ್‌ಪಿ) ಪುಟ್ಟರಾಜ ಹಣಮಂತ ನಂದಿ, ನ್ಯಾಷನಲ್ ಡೆವಲಪ್‌ಮೆಂಟ್ ಪಾರ್ಟಿಯಿಂದ ಬಾಬು ಪಾಶಾ ಮೊಯಿನುದ್ದಿನ್‌, ಜೈಹಿಂದ್‌ ಸೇನಾ ಪಕ್ಷದಿಂದ ರಾಮಚಂದ್ರ ನಾರಾಯಣ ಕಚವೆ, ಆಲ್ ಇಂಡಿಯಾ ಉಲಮಾ‌ ಕಾಂಗ್ರೆಸ್ ಪಕ್ಷದಿಂದ ಮೊಹಮ್ಮದ್ ಶಫೀಕ್ ಉರ್ ರೆಹಮಾನ್, ಪಕ್ಷೇತರರಾಗಿ ಜಯರಾಜ ಕಾಶಪ್ಪ ಬುಕ್ಕಾ ಹಾಗೂ ವಸಿಮುದ್ದಿನ್‌ ಅಬ್ದುಲ್‌ ಖಯುಮ್‌ ನಾಮಪತ್ರ ಸಲ್ಲಿಸಿದರು.

ಏ.19 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏ.20ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗುತ್ತದೆ. ಏ.22ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT