ಸೋಮವಾರ, ಸೆಪ್ಟೆಂಬರ್ 27, 2021
22 °C

ಬೀದರ್ ನಗರಸಭೆ ಚುನಾವಣೆ; ಬಿರುಸಿನ ಮತದಾನ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಇಲ್ಲಿಯ ನಗರಸಭೆಯ 32 ವಾರ್ಡ್‌ಗಳಿಗೆ ಇಂದು ಮಂಗಳವಾರ ಚುನಾವಣೆ ಆರಂಭಗೊಂಡಿದ್ದು, ಬೆಳಿಗ್ಗೆ 9 ಗಂಟೆ ಸುಮಾರಿಗೆ ಶೇ 8.17 ರಷ್ಟು ಮತದಾನವಾಗಿದೆ.

ಹುಮನಾಬಾದ್‌ ತಾಲ್ಲೂಕಿನ ಹಳ್ಳಿಖೇಡ(ಬಿ) ಪುರಸಭೆಯ ವಾರ್ಡ್ ಸಂಖ್ಯೆ 11 ರ ಸದಸ್ಯ ಸ್ಥಾನದ ಉಪ ಚುನಾವಣೆ ಮತದಾನವೂ ಬಿರುಸಿನಿಂದ ನಡೆದಿದೆ.

ಪ್ರಖರ ಬಿಸಿಲು ಇರುವ ಕಾರಣ ಮತದಾರರು ಬೆಳಗಿನ ಅವಧಿಯಲ್ಲಿಯೇ ಮತಗಟ್ಟೆಗಳಿಗೆ ಬಂದು ಮತಗಟ್ಟೆಗಳ ಮುಂದೆ ಹಾಕಲಾಗಿರುವ ಮಾರ್ಕ್‌ನಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಆಶಾ ಕಾರ್ಯಕರ್ತೆಯರು ಮತಗಟ್ಟೆಗಳಲ್ಲಿ ಮತದಾರರು ಒಳಗೆ ಪ್ರವೇಶಿಸುವ ಮೊದಲು ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸುತ್ತಿದ್ದಾರೆ.

ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಂತರ ಕಾಯ್ದುಕೊಳ್ಳದ ಹಾಗೂ  ಸರತಿ ಸಾಲಿನಲ್ಲಿ ನಿಲ್ಲದವರಿಗೆ ಪೊಲೀಸ್‌ ಸಿಬ್ಬಂದಿ ಪದೇ ಪದೆ ಎಚ್ಚರಿಕೆ ನೀಡುತ್ತಿದ್ದಾರೆ. ಒಟ್ಟಾರೆ ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾನದ ಅವಧಿಯನ್ನು ಒಂದು ಗಂಟೆ ವಿಸ್ತರಿಸಲಾಗಿದೆ. ಕೋವಿಡ್ ಸೋಂಕಿನ ಕಾರಣ ಸುರಕ್ಷತಾ ಕ್ರಮಗಳೊಂದಿಗೆ ಮತದಾನ ನಡೆಸುವುದು ಅವಶ್ಯಕವಾಗಿದೆ. ಮತದಾರರ ಸುರಕ್ಷತೆ ಹಾಗೂ ಸೋಂಕಿತರಿಗೂ ಮತದಾನ ಮಾಡಲು ಅವಕಾಶ ನೀಡುವ ಉದ್ದೇಶದಿಂದ ಮತದಾನವನ್ನು ಹೆಚ್ಚುವರಿ ಒಂದು ಗಂಟೆ ವಿಸ್ತರಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.


ಬೀದರ್‌ನ ಪಿಡಬ್ಲ್ಯೂಡಿ ಕಚೇರಿ ಆವರಣದ ಮತಗಟ್ಟೆಯಲ್ಲಿ ಸರತಿಸಾಲಿನಲ್ಲಿ ನಿಂತಿರುವ ಮತದಾರರು


ಬೀದರ್ ನ ವಾರ್ಡ್ ನಂ2 ರ ಓಲ್ಡ್ ಸಿಟಿ ಚೌಬಾರಾ ಪಾಂಡುರಂಗ ಮಂದಿರ ಸಮೀಪದ ಮತಗಟ್ಟೆಯಲ್ಲಿ ಮತದಾರರು ಕಾಯ್ದುಕೊಂಡು  ನಿಂತಿದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು