ಮಂಗಳವಾರ, 3 ಮಾರ್ಚ್ 2026
×
ADVERTISEMENT

ಅಪರೂಪದ ವನ್ಯಜೀವಿಗಳ ನೆಲೆಬೀಡು...ಬೀದರ್‌ನಲ್ಲಿವೆ ಅಳಿವಿನಂಚಿನ ಪ್ರಭೇದದ ಜೀವಿಗಳು

Published : 3 ಮಾರ್ಚ್ 2026, 5:46 IST
Last Updated : 3 ಮಾರ್ಚ್ 2026, 5:46 IST
ADVERTISEMENT
ಫಾಲೋ ಮಾಡಿ
Comments
ನರಿ
ನರಿ
‘ಜಂಗಲ್‌ ಕ್ಯಾಟ್‌’

‘ಜಂಗಲ್‌ ಕ್ಯಾಟ್‌’

‘ಚಿಂಕಾರ’
‘ಚಿಂಕಾರ’
ಬೀದರ್‌ ಜಿಲ್ಲೆ ಅಪರೂಪದ ವನ್ಯಜೀವಿಗಳ ತಾಣ. ಇವುಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಶ್ರಮಿಸುತ್ತಿದೆ. ನಾಗರಿಕರು ಕೂಡ ಅವುಗಳಿಗೆ ತೊಂದರೆಯಾಗದ ರೀತಿಯಲ್ಲಿ ವ್ಯವಹರಿಸುವ ಅಗತ್ಯವಿದೆ.
ವಿವೇಕಾನಂದ ಬಿ. ನ್ಯಾಚುರಲಿಸ್ಟ್‌
ನೀಲ್‌ಗಾಯ್‌
ನೀಲ್‌ಗಾಯ್‌
ಚಿರತೆಗಳ ಚಲನವಲನ
ಬೀದರ್‌ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಚಿರತೆಗಳು ಕೂಡ ಕಾಣಿಸಿಕೊಂಡಿವೆ. ಎರಡು ವರ್ಷಗಳ ಹಿಂದೆ ಕಾರಂಜಾ ಜಲಾಶಯದ ಹಿನ್ನೀರಿನ ಭಾಗದಲ್ಲಿ ಚಿರತೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇತ್ತೀಚೆಗೆ ಅಲ್ಲಲ್ಲಿ ಚಿರತೆಗಳ ಓಡಾಟ ಕಂಡು ಬಂದಿದೆ. ಇನ್ನು ಮಾಂಜ್ರಾ ನದಿ ತೀರದಲ್ಲಿ ಅಲ್ಲಲ್ಲಿ ಆಗಾಗ ಮೊಸಳೆಗಳು ಕಾಣಿಸಿಕೊಳ್ಳುತ್ತವೆ. ಆದರೆ ವನ್ಯಜೀವಿ ಹಾಗೂ ಮಾನವ ಸಂಘರ್ಷದ ಪ್ರಕರಣಗಳ ಸಂಖ್ಯೆ ತೀರ ಇಲ್ಲವೆನ್ನುಷ್ಟರಮಟ್ಟಿಗೆ ಇದೆ. ಆದರೆ ಜಿಂಕೆ ಕೃಷ್ಣಮೃಗಗಳು ಹೊಲಕ್ಕೆ ನುಗ್ಗಿ ಬೆಳೆ ತಿಂದು ಹೋಗುವ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತವೆ.
ಇಂಡಿಯನ್‌ ಗ್ರೇ ವೊಲ್ಫ್‌
ಚಿತ್ರಗಳು: ವಿವೇಕಾನಂದ ಬಿ.
ಇಂಡಿಯನ್‌ ಗ್ರೇ ವೊಲ್ಫ್‌ ಚಿತ್ರಗಳು: ವಿವೇಕಾನಂದ ಬಿ.
ಹುಲ್ಲುಗಾವಲು ಹೆಚ್ಚಿಸಲು ಕ್ರಮ
ಬೀದರ್‌ ಜಿಲ್ಲೆಯ ಕೋನಮೇಳಕುಂದಾ ಚಟ್ನಾಳ್ ಶಮಶೇರ್‌ನಗರ ಆಲೂರ್ ಬೇಲೂರ್‌ ಗಡಿಕುಶನೂರಿನಲ್ಲಿ ಹುಲ್ಲುಗಾವಲು ಪ್ರದೇಶ ಹೆಚ್ಚಿಸಲು ಅರಣ್ಯ ಇಲಾಖೆ ಶ್ರಮಿಸುತ್ತಿದೆ. 70ರ ದಶಕಕ್ಕೂ ಮುಂಚೆ ಈ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹುಲ್ಲುಗಾವಲು ಪ್ರದೇಶ ಇತ್ತು. 70ರ ದಶಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಟ್ಟಿರುವುದರಿಂದ ಅದರ ಪ್ರಮಾಣ ತಗ್ಗಿದೆ. ಈಗ ಪುನಃ ಹುಲ್ಲುಗಾವಲು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಇನ್ನು ಜಿಲ್ಲೆಯಲ್ಲಿ ಮಣ್ಣು ಗಣಿಗಾರಿಕೆ ನಡೆಯುತ್ತಿರುವುದರಿಂದ ಗುಡ್ಡಗಳು ಬೋಳಾಗುತ್ತಿವೆ. ಹೊಸ ಕಾಮಗಾರಿಗಳಿಂದ ವನ್ಯಜೀವಿಗಳ ಸಹಜ ಓಡಾಟದ ಮಾರ್ಗ ಬದಲಾಗುತ್ತಿದೆ. ಎಲ್ಲೆಂದರಲ್ಲಿ ಬ್ಲಾಸ್ಟ್‌ ಟಿಪ್ಪರಗಳ ಓಡಾಟಕ್ಕೆ ತೊಂದರೆಯಾಗುತ್ತಿದ್ದು ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆನ್ನುತ್ತಾರೆ ವನ್ಯಜೀವಿ ಪರ ಇರುವವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT