ಬೀದರ್: ಪ್ರವರ್ಗ 2 ರಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಶೇ 4 ರಷ್ಟು ಮೀಸಲಾತಿ ರದ್ದುಪಡಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ಬಹುಜನ ಸಮಾಜ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಪಕ್ಷದ ಮುಖಂಡರು ನಗರದಲ್ಲಿ ನಿಯೋಗದಲ್ಲಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ಒಕ್ಕಲಿಗರು ಹಾಗೂ ಲಿಂಗಾಯತರ ಕೋರಿಕೆ ಈಡೇರಿಕೆಗೆ ಮುಸ್ಲಿಂ ಮೀಸಲಾತಿ ರದ್ದುಪಡಿಸಿರುವುದು ಸರಿಯಲ್ಲ. ಮುಸ್ಲಿಂ ಸಮುದಾಯದ ಮೀಸಲಾತಿ ಕಸಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ದತ್ತು ಸೂರ್ಯವಂಶಿ, ಕಾರ್ಯದರ್ಶಿಗಳಾದ ಅಂಕುಶ ಗೋಖಲೆ, ಜ್ಞಾನೇಶ್ವರ ಸಿಂಗಾರೆ, ಪ್ರಕಾಶ ಕೋಟೆ, ಜಮೀಲ್ ಖಾನ್, ಮುಖಂಡರಾದ ರಾಜಕುಮಾರ ಸಿಂಧೆ, ತಿಪ್ಪಣ್ಣ ವಾಲಿ, ಗುಣವಂತ ಸೂರ್ಯವಂಶಿ, ಕಪಿಲ್ ಗೋಡಬೋಲೆ, ದತ್ತಪ್ಪ ಭಂಡಾರಿ, ಸಂಜುಕುಮಾರ ಮೇದಾ, ಶಶಿಕಾಂತ ಬಾವಿದೊಡ್ಡಿ, ಅಶೋಕ ಮಂಠಾಳಕರ್, ವಹೀದ್ ಲಖನ್, ಶೇಕ್ ಮೆಹಬೂಬ್, ಜಾಫರ್, ಡಿಸೋಜಾ, ಮಹೇಶ, ಮಹ್ಮಮದ್ ಮೂಸಾ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.