ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಬುದ್ಧ ಪೂರ್ಣಿಮೆ ಆಚರಣೆ

Last Updated 16 ಮೇ 2022, 15:49 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ವಿವಿಧೆಡೆ ಬೌದ್ಧ ವಿಹಾರಗಳಲ್ಲಿ ಸೋಮವಾರ ಬುದ್ಧ ಪೂರ್ಣಿಮೆ ಆಚರಿಸಲಾಯಿತು.

ಬುದ್ಧನ ಅನುಯಾಯಿಗಳು ಹಾಗೂ ಮಹಿಳೆಯರು ಹಾರೂರಗೇರಿಯಿಂದ ಮೆರವಣಿಗೆಯಲ್ಲಿ ಗಾಂಧಿ ಗಂಜ್‌ ಬೌದ್ಧ ವಿಹಾರಕ್ಕೆ ಬಂದು ಪೂಜೆ ಸಲ್ಲಿಸಿದರು. ಗಾಂಧಿ ಗಂಜ್‌ ಬೌದ್ಧ ವಿಹಾರದಲ್ಲಿ ಭೀಮಸೇನೆಯ ವತಿಯಿಂದಲೂ ಪೂಜೆ ಸಲ್ಲಿಸಲಾಯಿತು.

ಸಂಜೆ ಗಾಂಧಿ ಗಂಜ್‌ನಿಂದ ಜನವಾಡ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್‌ ಸಮುದಾಯ ಭವನದ ವರೆಗೆ ಬುದ್ಧನ ಪ್ರತಿಮೆಯ ಮೆರವಣಿಗೆ ನಡೆಸಲಾಯಿತು.

ನಗರದ ಮೈಲೂರ್‌ನಲ್ಲಿರುವ ಸಿಎಂಸಿ ಕಾಲೊನಿಯ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಸಮಿತಿ ವತಿಯಿಂದ ಬುದ್ಧ ಪೂರ್ಣಿಮೆ ಆಚರಿಸಲಾಯಿತು.

ಸಮಿತಿ ಅಧ್ಯಕ್ಷ ವಿಠ್ಠಲ್‌ರಾವ್ ಮನ್ನಾಎಖ್ಖೆಳ್ಳಿಕರ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಕನ್ನಡಿಗರ ಸಂಸ್ಥೆಯ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ, ಶಂಕರರಾವ್‌ ಕರಕನಳ್ಳಿ, ಕಾಶೀನಾಥ ಬಡಿಗೇರ, ಮಲ್ಲಿಕಾರ್ಜುನ ಜಾಬನೂರ್, ಲಕ್ಷ್ಮಣ ಮಿಠಾರೆ, ಲಕ್ಷ್ಮಣ ಕಾಂಚೆ, ಧುಳಪ್ಪ ಮಾಸ್ಟರ್, ಸೂರ್ಯಕಾಂತ ಪ್ಯಾರೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT