49 ಅಭ್ಯರ್ಥಿಗಳು ಶಿಶಿಕ್ಷು ತರಬೇತಿಗೆ ಆಯ್ಕೆ

ಬೀದರ್: ಸಿ.ಬಿ.ಟಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ಜಿಲ್ಲೆಯ ವಿವಿಧ ಐಟಿಐಗಳ 49 ಅಭ್ಯರ್ಥಿಗಳು ಬೆಂಗಳೂರಿನ ಬಿ.ಇ.ಎಲ್ ಕಾರ್ಖಾನೆಗೆ ಶಿಶಿಕ್ಷು ತರಬೇತಿಗೆ ಆಯ್ಕೆಯಾಗಿದ್ದಾರೆ.
ಕೋವಿಡ್ ಕಾರಣ ಇಲ್ಲಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ಆಯೋಜಿಸಿದ್ದ ಆನ್ಲೈನ್ ಸಂದರ್ಶನದಲ್ಲಿ ಕಾರ್ಖಾನೆ ಪ್ರತಿನಿಧಿಗಳು, ಔರಾದ್ ಐಟಿಐನ 7, ಬೀದರ್ ಐಟಿಐನ 26, ಬಸವೇಶ್ವರ ಅಂಗವಿಕಲರ ಐಟಿಐನ 15 ಹಾಗೂ ಕರ್ನಾಟಕ ಐಟಿಐನ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡರು.
ಆಯ್ಕೆಯಾದವರಿಗೆ ಮಾಸಿಕ ₹ 9,550 ವಿದ್ಯಾರ್ಥಿ ವೇತನ ಸಿಗಲಿದೆ. ಜುಲೈ 19ಕ್ಕೆ ಕಾರ್ಖಾನೆಗೆ ಶಿಶಿಕ್ಷು ತರಬೇತಿಗೆ ಹಾಜರಾಗಬೇಕಾಗಲಿದೆ ಎಂದು ಬಿ.ಇ.ಎಲ್ ಕಾರ್ಖಾನೆಯ ಮಾನವ ಸಂಪನ್ಮೂಲ ಅಧಿಕಾರಿ ನಂಜುಂಡಸ್ವಾಮಿ ತಿಳಿಸಿದರು.
ಶಿವಶಂಕರ ಟೋಕರೆ ಅವರು ಕ್ಯಾಂಪಸ್ ಸಂದರ್ಶನ ಆಯೋಜಿಸಿ ಐಟಿಐ ಅಭ್ಯರ್ಥಿಗಳಿಗೆ ನೆರವಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಐಟಿಐ ಜಿಲ್ಲಾ ನೋಡಲ್ ಅಧಿಕಾರಿ ಶಿವಶಂಕರ ಟೋಕರೆ, ಪ್ರಾಚಾರ್ಯ ಶಿವಕುಮಾರ ಪಾಟೀಲ, ಸಂಜೀವರೆಡ್ಡಿ, ತುಕಾರಾಮ ನಿರ್ಣಾಕರ, ಬಸವರಾಜ ಡಿಗ್ಗೆ ಇದ್ದರು.
ಯುಸೂಫ್ಮಿಯ ಸ್ವಾಗತಿಸಿದರು. ಬಾಬು ಪ್ರಭಾಜಿ ನಿರೂಪಿಸಿದರು. ರಾಘವೇಂದ್ರ ಮುತ್ತಂಗಿ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.