ಭಾನುವಾರ, ಜೂನ್ 26, 2022
22 °C

ಬಸವಕಲ್ಯಾಣ; ಬಾಲಕಿಯ ಮದುವೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ನಗರದಲ್ಲಿ ಬುಧವಾರ ಬಾಲಕಿಯೊಂದಿಗೆ ನಡೆಯುತ್ತಿದ್ದ ಮದುವೆಯನ್ನು ಜಿಲ್ಲಾ ಮಕ್ಕಳ‌ ರಕ್ಷಣಾಧಿಕಾರಿಗಳ ತಂಡ ತಡೆದಿದೆ.

ನಗರದ ಹಿಂಗುಲಾಂಬಿಕಾ ದೇವ ಸ್ಥಾನ ದಲ್ಲಿ ಮದುವೆಗಾಗಿ ಸಿದ್ಧತೆ ನಡೆ ದಿತ್ತು. ಶಹಾಪುರ ಓಣಿಯ 24 ವರ್ಷದ ಯುವಕನ ಮದುವೆ ಮಹಾರಾಷ್ಟ್ರದ ನಿಲಂಗಾ ತಾಲ್ಲೂಕಿನ 16 ವರ್ಷದ ಬಾಲಕಿಯೊಂದಿಗೆ ನಡೆಯುವುದಿತ್ತು.

ಪೊಲೀಸರು, ಮಹಿಳಾ ಮತ್ತು ಮಕ್ಕಳ‌ ಕಲ್ಯಾಣಾಧಿ ಕಾರಿಗಳು ಸ್ಥಳಕ್ಕೆ ಬಂದು ರದ್ದು ಗೊಳಿಸಿದರು. ‘ನಿಗದಿತ ವಯಸ್ಸು ಆಗುವ ವರೆಗೆ ಮದುವೆ ಮಾಡುವುದಿಲ್ಲ ಎಂದು ಪಾಲಕರಿಂದ ಮುಚ್ಚಳಿಕೆ ಪತ್ರ ಬರೆದುಕೊಳ್ಳಲಾಯಿತು’ ಎಂದು ಅಧಿ ಕಾರಿಗಳು ತಿಳಿಸಿದ್ದಾರೆ. ಮಕ್ಕಳ ರಕ್ಷಣಾ ಘಟಕದ ಸಹಾಯ ವಾಣಿ ಜಿಲ್ಲಾ ಧಿಕಾರಿ ವಿನೋದ ಕುರೆ, ಸಿಡಿಪಿಒ ಶ್ರೀಕಾಂತ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.