ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರ ಆರೋಗ್ಯ ತಪಾಸಣೆ; ಚಿಕಿತ್ಸೆ

ಮಕ್ಕಳ ಆರೋಗ್ಯ ನಂದನ ಯೋಜನೆಗೆ ಚಾಲನೆ
Last Updated 13 ಅಕ್ಟೋಬರ್ 2021, 3:37 IST
ಅಕ್ಷರ ಗಾತ್ರ

ಹುಮನಾಬಾದ್: ಕೋವಿಡ್ ಮೂರನೇ ಅಲೆಯು ಅಪೌಷ್ಟಿಕ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಮಕ್ಕಳ ಆರೋಗ್ಯ ರಕ್ಷಣೆಗೆ ಸರ್ಕಾರ ಜಾರಿಗೊಳಿಸಿರುವ ‘ಆರೋಗ್ಯ ನಂದನ ಕಾರ್ಯಕ್ರಮ‘ದಡಿಯಲ್ಲಿ ವಿಶೇಷ ಆರೋಗ್ಯ ತಪಾಸಣೆ ಹಮ್ಮಿಕೊಂಡಿದ್ದೇವೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶಿವಕುಮಾರ ಸಿದ್ದೇಶ್ವರ ತಿಳಿಸಿದರು.

ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ತಾಲ್ಲೂಕು ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಡೆದ ’ಆರೋಗ್ಯ ನಂದನ ಕಾರ್ಯಕ್ರಮ‘ದಲ್ಲಿ ಅವರು ಮಾತನಾಡಿದರು.

ಚಿಕ್ಕ ಮಕ್ಕಳ ತಜ್ಞ ಡಾ. ಚಂದಾ ಇಂದ್ರಜೀತ, ಮುಖ್ಯ ವೈದ್ಯಾಧಿಕಾರಿ ಡಾ. ನಾಗನಾಥ ಹುಲಸೂರೆ, ಡಾ. ಯೋಗೇಶ,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲ್ಲೂಕು ಅಧಿಕಾರಿ ಶಿವಪ್ರಕಾಶ ಹಿರೇಮಠ ಮಾತನಾಡಿದರು.
ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದ ವೈದ್ಯರಾದ ಡಾ. ಕಪೀಲ್, ಡಾ. ಯೋಗೇಶ್ವರಿ, ಡಾ. ಸುರೇಖಾ, ಡಾ. ಪೂಜಾ. ಗೌತಮ ಶಿಂಧೆ, ಜಿಲ್ಲಾ ಸಂಯೋಜಕಿ ಡಾ. ಜೈಶಾಲಿ ಮುಡಬಿ, ಶುಶ್ರೂಷಕಿಯರಾದ ವಿನೋಲಿಯಾ, ಶ್ರುತಿ, ಅವಿನಾಶ ವೈದೇಹಿ ಆಸ್ಪತ್ರೆಯ ಲೊಕೇಶ ಇದ್ದರು. ಶಿವಕುಮಾರ ಕಿವಡೆ ಸ್ವಾಗತಿಸಿದರು. ಶಿವಕುಮಾರ ಕಂಪ್ಲಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT