ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ನಲ್ಲಿ ‘ಕೈರಾನ್‌’ ಕ್ಯಾನ್ಸರ್‌ ಸೆಂಟರ್‌ ಆರಂಭ

Published 18 ನವೆಂಬರ್ 2023, 16:54 IST
Last Updated 18 ನವೆಂಬರ್ 2023, 16:54 IST
ಅಕ್ಷರ ಗಾತ್ರ

ಬೀದರ್‌: ‘ಸ್ಥಳೀಯವಾಗಿ ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ಅತ್ಯುತ್ತಮ ಗುಣಮಟ್ಟದ ‘ಕೈರಾನ್‌’ ಕ್ಯಾನ್ಸರ್‌ ಸೆಂಟರ್‌ ಅನ್ನು ನಗರದ ವಿಶ್ವ ಆಸ್ಪತ್ರೆಯಲ್ಲಿ ಆರಂಭಿಸಲಾಗಿದೆ’ ಎಂದು ವಿಶ್ವ ಆಸ್ಪತ್ರೆಯ ಮುಖ್ಯಸ್ಥ ಡಾ.ಶಶಾಂಕ್‌ ಕುಲಕರ್ಣಿ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್‌ ರೋಗಕ್ಕಾಗಿ ಹೈದರಾಬಾದ್‌, ಬೆಂಗಳೂರು ಸೇರಿದಂತೆ ಇತರೆ ಮಹಾನಗರಗಳಿಗೆ ಜನ ಹೋಗುತ್ತಾರೆ. ಇದರಿಂದ ಪ್ರಯಾಣದ ವೆಚ್ಚ, ದುಬಾರಿ ಚಿಕಿತ್ಸಾ ವೆಚ್ಚದಿಂದ ಜನರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ನಗರದಲ್ಲಿ ಕ್ಯಾನ್ಸರ್‌ ಆಸ್ಪತ್ರೆ ಆರಂಭಿಸಲಾಗಿದೆ. ಮಹಾನಗರಗಳ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಹೋಲಿಸಿದರೆ ಚಿಕಿತ್ಸಾ ವೆಚ್ಚವೂ ಬಹಳ ಕಡಿಮೆ ಇದೆ ಎಂದು ವಿವರಿಸಿದರು.

ರೇಡಿಯೇಷನ್‌ ಸೌಲಭ್ಯ ಹೊರತುಪಡಿಸಿ ಕ್ಯಾನ್ಸರ್‌ಗೆ ಬೇಕಿರುವ ಎಲ್ಲಾ ರೀತಿಯ ಚಿಕಿತ್ಸಾ ಸೌಲಭ್ಯ ನಮ್ಮಲ್ಲಿದೆ. ಹತ್ತು ಜನ ಆಂಕೋಲಾಜಿಸ್ಟ್‌ಗಳು ಬೆಂಗಳೂರಿನಲ್ಲಿ ಕೈರಾನ್‌ ಕ್ಯಾನ್ಸರ್‌ ಆಸ್ಪತ್ರೆ ಆರಂಭಿಸಿದ್ದರು. ಅವರು ಆರಂಭಿಸಿದ ಶಾಖೆ ಇದಾಗಿದೆ. ಬೀದರ್‌ನಲ್ಲಿ ಇನ್ಮುಂದೆ ಉತ್ತಮ ಚಿಕಿತ್ಸೆ ಸಿಗಲಿದ್ದು, ಅನ್ಯ ಊರುಗಳಿಗೆ ಹೋಗುವ ಅಗತ್ಯವಿಲ್ಲ ಎಂದರು.

ಬೀದರ್‌, ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವುದರಿಂದ ಈ ಭಾಗದಲ್ಲಿ ತಂಬಾಕು ಸೇವನೆ ಹೆಚ್ಚಿನ ಪ್ರಮಾಣದಲ್ಲಿದೆ. ಅದರಲ್ಲೂ ಬಾಯಿ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತವೆ. ಅನೇಕರು ಚಿಕಿತ್ಸೆಗೆ ಕೊನೆಯ ಹಂತದಲ್ಲಿ ಹೋಗಿ ಜೀವ ಕಳೆದುಕೊಳ್ಳುತ್ತಾರೆ. ಇದನ್ನು ತಪ್ಪಿಸುವ ಉದ್ದೇಶದಿಂದ ಜಾಗೃತಿ ಮೂಡಿಸಲಾಗುತ್ತಿದೆ. ಹೊಸ ವೈದ್ಯರಿಗೆ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು. 

ಡಾ.ಸುನಿಲ್‌, ಡಾ.ಶ್ರೀಕಾಂತ ರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT