ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೇಳಕ್ಕೆ ಚುಕು ಬುಕು ರೈಲು...

‘ಬ್ರೇಕ್ ಡ್ಯಾನ್ಸ್' ಜೋಕಾಲಿಯಲ್ಲಿ ನಲಿದ ಚಿಣ್ಣರು
Last Updated 8 ಜನವರಿ 2023, 10:16 IST
ಅಕ್ಷರ ಗಾತ್ರ

ಬೀದರ್: ಈ ಬಾರಿಯ ಬೀದರ್ ಉತ್ಸವಕ್ಕೆ ಚುಕು ಬುಕು ರೈಲು ಕೂಡ ಬಂದಿದೆ.


ಉತ್ಸವ ಪ್ರಯುಕ್ತ ಕೋಟೆ ಆವರಣದಲ್ಲಿ ನಡೆಯುತ್ತಿರುವ ಮಕ್ಕಳ ಮೇಳದಲ್ಲಿ ಚಿಣ್ಣರು ರೈಲಿನಲ್ಲಿ ಕುಳಿತು ಸಂಭ್ರಮಿಸಿದರು.
ಡ್ರ್ಯಾಗನ್ ಟ್ರೇನ್, ಮಿನಿ ಟ್ರೇನ್, ಹೆಲಿಕಾಪ್ಟರ್, ಜಾಯಿಂಟ್ ವ್ಹೀಲ್, ಬ್ರೇಕ್ ಡಾನ್ಸ್ ಜೋಕಾಲಿ, ಧೂಮ್ ಬೈಕ್, ಪಾನಿ ಬೋಟ್, ತೊರಾ ತೊರಾ, ಏರ್ ಬಲೂನ್, ಕೊಲೊಂಬೊ, ಜಂಪಿಂಗ್, ಧೂಮ್ ಚಕ್ರಿ ಮೊದಲಾದವು ಮಕ್ಕಳು ಸಂತಸದ ಲೋಕದಲ್ಲಿ ತೇಲಾಡುವಂತೆ ಮಾಡಿದವು.


ಪಾಲಕರೊಂದಿಗೆ ಬಂದಿದ್ದ ಮಕ್ಕಳು ₹ 20 ರಿಂದ ₹ 100 ರ ವರೆಗಿನ ಟಿಕೆಟ್ ಪಡೆದು ವಿವಿಧ ಆಟಿಕೆಗಳಲ್ಲಿ ಕುಳಿತು ಮೋಜು ಮಾಡಿದರು.


ಮಕ್ಕಳ ಆಟಗಳಿಗೆ ವೇದಿಕೆ ಕಲ್ಪಿಸಲು ಬೀದರ್ ಉತ್ಸವ ಅಂಗವಾಗಿ ಮಕ್ಕಳ ಮೇಳ ಹಮ್ಮಿಕೊಳ್ಳಲಾಗಿದೆ. ಮೇಳಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮಕ್ಕಳ ಮೇಳದ ಸಂಯೋಜಕಿ ಸುವರ್ಣಾ ಹೇಳಿದರು.


ಮಕ್ಕಳ ಮೇಳದಲ್ಲಿ ಮಕ್ಕಳಿಗಾಗಿ ವಿವಿಧೆಡೆಯಿಂದ ಹಲವಾರು ಆಟಿಕೆಗಳು ಬಂದಿವೆ. ಬ್ರೇಕ್ ಡ್ಯಾನ್ಸ್, ಜೈಂಟ್ ವ್ಹೀಲ್, ಕೊಲೊಂಬೊ ಮೊದಲಾದ ಕ್ರೀಡೆಗಳಿಗೆ ಹೆಚ್ಚು ಬೇಡಿಕೆ ಕಂಡು ಬಂದಿದೆ. ಮಕ್ಕಳ ಮೇಳ ಸೋಮವಾರವೂ ಇರಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT