ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಮನಾಬಾದ್ | ಸಕ್ಕರೆ ಕಾರ್ಖಾನೆಗೆ ಅಗತ್ಯ ಸಹಕಾರ: ಖೇಣಿ

Last Updated 12 ಡಿಸೆಂಬರ್ 2021, 18:07 IST
ಅಕ್ಷರ ಗಾತ್ರ

ಹುಮನಾಬಾದ್: ರೈತರು ನೇಮ್ಮದಿಯಿಂದ ಇದ್ದರೆ ಮಾತ್ರ ದೇಶಕ್ಕೆ ಉಳಿಗಾಲವಿದೆ ಎಂದು ಮಾಜಿ ಶಾಸಕ ಅಶೋಕ ಖೇಣಿ ಹೇಳಿದರು.

ಹಳಿಖೇಡ್ ಬಿ. ಪಟ್ಟಣದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಿಎಸ್‍ಎಸ್‍ಕೆ ಕಾರ್ಖಾನೆಯು ರಾಜ್ಯದಲ್ಲೇ ಅತ್ಯಂತ ಹಳೆಯ ಕಾರ್ಖಾನೆಯಾಗಿದ್ದು, ಇದರ ಮೇಲೆ ಸಾವಿರಾರು ಕಬ್ಬು ಬೆಳೆಗಾರರು ಮತ್ತು ಕಾರ್ಮಿಕರು ಅವಲಂಬಿತರಾಗಿದ್ದಾರೆ. ಎರಡು ವರ್ಷಗಳಿಂದ ಸ್ಥಗಿತವಾಗಿದ್ದ ಕಾರ್ಖಾನೆಯು ನೂತನ ಆಡಳಿತ ಮಂಡಳಿಯ ಪ್ರಯತ್ನದಿಂದ ಪುನಾರಾರಂಭವಾಗಿದೆ. ಇದು ಜಿಲ್ಲೆಯ ಕಬ್ಬು ಬೆಳೆಗರರಲ್ಲಿ ಸಂತಸ ಮೂಡಿಸಿದೆ. ಕಾರ್ಖಾನೆಯ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕಾರ್ಖಾನೆಯ ಅಧ್ಯಕ್ಷ ಸುಭಾಷ್ ಕಲ್ಲೂರು ಮಾತನಾಡಿ, ಲಕ್ಷಾಂತರ ರೂಪಾಯಿ ಸಾಲ ಮತ್ತು ಹಿಂದಿನ ಅಧ್ಯಕ್ಷರ ದುರಾಡಳಿತದಿಂದ ಸುಮಾರು 2 ವರ್ಷ ಬಂದ್ ಆಗಿತ್ತು. ಕಾರ್ಖಾನೆಯ ಪುನರಾರಂಭಕ್ಕೆ ಹೊಸ ಆಡಳಿತ ಮಂಡಳಿಯ ಸದಸ್ಯರು, ಕಾರ್ಮಿಕರು ಸಾಕಷ್ಟು ಶ್ರಮಿಸಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಳಕರ್, ಹಳಿಖೇಡ್ ಪಂಡಿತರಾಧ್ಯ ಶಿವಾಚಾರ್ಯ, ಕಾರ್ಖಾನೆ ಆಡಳಿತ ಮಂಡಳಿಯ ಸದಸ್ಯರಾದ ವಿಶ್ವನಾಥ ಪಾಟೀಲ ಮಾಡಗೂಳ, ಮಲ್ಲಿಕಾರ್ಜುನ ಪಾಟೀಲ, ಮಾಣಿಕಪ್ಪ ಖಾಶಂಪೂರ್, ಶ್ರೀನಿವಾಸ ಪತ್ತರ್, ಬಿಜೆಪಿ ಮುಖಂಡ ಸೋಮನಾಥ ಪಾಟೀಲ, ರಮೇಶ ಕಲ್ಲೂರು, ಕಾರ್ಖಾನೆಯ ಎಂ.ಡಿ.ಉಪ್ಪಿನ್ ಇದ್ದರು. ಕಾರ್ಖಾನೆಯ ಉಪಾಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಪ್ರಸ್ತಾವಿಕವಾಗಿ ಮಾತನಾಡಿದರು. ಹುಲಸೂರಿನ ಶಿವಾನಂದ ಸ್ವಾಮಿ ಆರ್ಶಿವಚನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT