ಶನಿವಾರ, ಮೇ 21, 2022
25 °C
ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆ ಕಾರ್ಯಾಗಾರ: ಪಿಎಸ್‍ಐ ಸುವರ್ಣಾ ಹೇಳಿಕೆ

ಸ್ಪರ್ಧಾತ್ಮಕ ಪರೀಕ್ಷೆ ಯಶಸ್ಸಿಗೆ ತಯಾರಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಲು ನಿರ್ದಿಷ್ಟ ಯೋಜನೆ ಹಾಕಿಕೊಂಡು ತಯಾರಿ ನಡೆಸುವುದು ಅಗತ್ಯ ಎಂದು ಬೀದರ್ ಗ್ರಾಮೀಣ ಠಾಣೆ ಪಿಎಸ್‍ಐ ಸುವರ್ಣಾ ಹೇಳಿದರು.

ನಗರದ ಶ್ರೀ ಸಾಯಿ ಆದರ್ಶ ಪ್ರೌಢಶಾಲೆಯಲ್ಲಿ ಸ್ಪರ್ಧಾಗುರು ಐಎಎಸ್, ಕೆಎಎಸ್ ಸ್ಟಡಿ ಸೆಂಟರ್ ವತಿಯಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆ ಕುರಿತ ಉಚಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳು ಸಂಪನ್ಮೂಲ ವ್ಯಕ್ತಿಗಳು, ನುರಿತ ಉಪನ್ಯಾಸಕರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾದವರ ಮಾರ್ಗದರ್ಶನ ಪಡೆಯಬೇಕು ಎಂದು ತಿಳಿಸಿದರು.

ಡಿ.ಎಡ್, ಬಿ.ಎಡ್. ಅಭ್ಯರ್ಥಿಗಳು ಟಿಇಟಿ, ಸಿಇಟಿಗೆ ಸೀಮಿತ ಆಗಬಾರದು. ಪಿಎಸ್‍ಐ, ಪಿಡಿಒ, ಎಫ್‍ಡಿಎ, ಎಸ್‍ಡಿಎ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು ಎಂದು ಸಲಹೆ ಮಾಡಿದರು.

ಸ್ಪರ್ಧಾಗುರು ಐಎಎಸ್ ಆ್ಯಂಡ್ ಕೆಎಎಸ್ ಸ್ಟಡಿ ಸೆಂಟರ್ ನಿರ್ದೇಶಕ ಅಮೀತ್ ಸೋಲಪುರ ಮಾತನಾಡಿ, ಸೆಂಟರ್ 2015 ರಿಂದ ಜಿಲ್ಲೆಯ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ. ಉಚಿತ ಕಾರ್ಯಾಗಾರಗಳ ಮೂಲಕ ಅಗತ್ಯ ಮಾರ್ಗದರ್ಶನ ನೀಡುತ್ತಿದೆ ಎಂದು ತಿಳಿಸಿದರು.

ಸೆಂಟರ್‍ನಲ್ಲಿ ತರಬೇತಿ ಪಡೆದವರು ಉಪನ್ಯಾಸಕ, ಪಿಡಿಒ, ಎಸ್‍ಡಿಎ, ಎಫ್‍ಡಿಎ, ಹಾಸ್ಟೇಲ್ ವಾರ್ಡನ್, ಪೊಲೀಸ್ ಕಾನ್‍ಸ್ಟೆಬಲ್, ಅಂಗನವಾಡಿ ಮೇಲ್ವಿಚಾರಕಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಂಕಿತಾ, ಸಂಧ್ಯಾರಾಣಿ, ಜ್ಞಾನದೇವಿ, ಕರುಣಾ, ದಿವ್ಯಭಾರತಿ, ಲಕ್ಷ್ಮಿ, ಮಾಳಿಂಗರಾಯ, ವಿಜಯಕುಮಾರ, ಟಿಇಟಿಯಲ್ಲಿ ಅರ್ಹತೆ ಪಡೆದ ಓಂಕಾರ ಕನ್ನಾಳೆ, ಪ್ರಿಯಂಕಾ ಎಸ್. ಮಲ್ಕಾಪುರೆ, ಪ್ರೇಮಾ ಡಿ. ಶಾಮಣ್ಣ, ಗೀತಾ ಗುನ್ನಳ್ಳಿ, ರೇಣುಕಾ ಹಾಗೂ ಆಕಾಶ ಮೋರೆ ಅವರನ್ನು ಸನ್ಮಾನಿಸಲಾಯಿತು.

ಡಯಟ್ ಉಪನ್ಯಾಸಕ ಸಂತೋಷಕುಮಾರ ಪೂಜಾರಿ ಕಾರ್ಯಗಾರವನ್ನು ಉದ್ಘಾಟಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಗೀತಾ, ಇಂಗ್ಲಿಷ್ ಸಂಪನ್ಮೂಲ ವ್ಯಕ್ತಿ ಶರಣಪ್ಪ ಸಾಗರ್, ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ವೀರಣ್ಣ, ಕನ್ನಡ ಉಪನ್ಯಾಸಕ ಜಗನ್ನಾಥ ಕಮಲಾಪುರೆ ಉಪಸ್ಥಿತರಿದ್ದರು.

ರಮೇಶ ಮರ್ಜಾಪೂರ ಸ್ವಾಗತಿಸಿದರು. ನಾಗನಾಥ ಬಿರಾದಾರ ನಿರೂಪಿಸಿದರು. ಗೀತಾ ಗುನ್ನಳ್ಳಿ ವಂದಿಸಿದರು. ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಮಾದರಿ ಪರೀಕ್ಷೆ ನಡೆಯಿತು. 150 ಜನ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.