ಬೀದರ್: ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಅವರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ವಿರುದ್ಧ ಕೀಳು ಪದ ಪ್ರಯೋಗಿಸಿ ನೀಡಿದ್ದಾರೆ ಎನ್ನಲಾದ ಹೇಳಿಕೆಗೆ ಕೆಪಿಸಿಸಿ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರವಾಗಿ ಖಂಡಿಸಿದೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಉಪಾಧ್ಯಕ್ಷ ಬಾಬುರಾವ್ ತುಂಬಾ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಮಹ್ಮದ್ ಸಮಿ, ಜಾರ್ಜ್ ಫರ್ನಾಂಡಿಸ್, ಕಾರ್ಯದರ್ಶಿಗಳಾದ ಸುನೀಲ್ ಬಚ್ಚನ್ ಹಾಗೂ ರವೀಂದ್ರ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಜಾನ್ ವೆಸ್ಲಿ ಅವರು ಈ ಕುರಿತು ಸೋಮವಾರ ಪ್ರತ್ಯೇಕ ಪ್ರಕಟಣೆ ಹೊರಡಿಸಿದ್ದಾರೆ.

ರಾಜಕೀಯ ಜೀವನದಲ್ಲಿ ಪರಸ್ಪರ ಟೀಕೆ ಸಹಜವಾದರೂ, ವೈಯಕ್ತಿಕವಾಗಿ ಅವಹೇಳನ ಮಾಡುವುದು ಹಾಗೂ ಅಸಭ್ಯ ಭಾಷೆ ಬಳಸುವುದು ಸಂಸದ ಮತ್ತು ಕೇಂದ್ರ ಸಚಿವರಾಗಿದ್ದ ವ್ಯಕ್ತಿಗೆ ಶೋಭೆ ತರುವಂತದ್ದಲ್ಲ ಎಂದು ಹೇಳಿದ್ದಾರೆ.

ಕ್ಷೇತ್ರದ ಜನತೆ ಖೂಬಾ ಅವರಿಗೆ 10 ವರ್ಷ ಸಂಸದರಾಗುವ ಅವಕಾಶ ನೀಡಿದ್ದು, ಇದೀಗ ಸಾಗರ ಖಂಡ್ರೆ ಅವರಿಗೆ ಅವಕಾಶ ನೀಡಿದ್ದಾರೆ. ಜನರ ತೀರ್ಪನ್ನು ಗೌರವಿಸಿ, ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಬೇಕು. ಪ್ರತಿಯೊಂದು ವಿಷಯದಲ್ಲೂ ವಿರೋಧ ವ್ಯಕ್ತಪಡಿಸಿ ವೈಯಕ್ತಿಕ ಟೀಕೆ ಮಾಡುವುದು ಜನಾಭಿಪ್ರಾಯಕ್ಕೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರದ ‘ಪ್ರಸಾದ’ ಯೋಜನೆಯಡಿ ಪಾಪನಾಶ ದೇವಸ್ಥಾನ ಅಭಿವೃದ್ಧಿ ಕಾಮಗಾರಿ ಖೂಬಾ ಅವರ ಅವಧಿಯಲ್ಲಿ ಮಂಜೂರಾದರೂ, ಅನುದಾನ ಬಿಡುಗಡೆ ಆಗಿರಲಿಲ್ಲ. ಸಾಗರ ಖಂಡ್ರೆ ಅವರು ಸಂಸದರಾದ ಬಳಿಕ ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಯಾರೇ ಅನುದಾನ ತಂದರೂ ಸ್ವಾಗತಿಸುವ ಔದಾರ್ಯವನ್ನು ಖೂಬಾ ಅವರು ತೋರಬೇಕು ಎಂದು ಸಲಹೆ ನೀಡಿದ್ದಾರೆ.

ಈಶ್ವರ ಖಂಡ್ರೆ ಅವರ ಕುರಿತು ಕೆಟ್ಟ ಶಬ್ದ ಬಳಸಿ ಸಾರ್ವಜನಿಕವಾಗಿ ಲಘುವಾಗಿ ವರ್ತಿಸಿದ್ದಕ್ಕಾಗಿ ಭಗವಂತ ಖೂಬಾ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಿದೆ.

Cut-off box - ಸಂಸದರ ವಿರುದ್ಧದ ಹೇಳಿಕೆ ಸರಿಯಲ್ಲ ( ಚಿತ್ರ ಇದೆ– ಸೋಮನಾಥ ಮುಧೋಳ) ಬೀದರ್: ಸಂಸದ ಸಾಗರ್ ಖಂಡ್ರೆ ಅವರ ಅಭಿವೃದ್ಧಿ ಕಾರ್ಯ ನೋಡಿ ಸಹಿಸಿಕೊಳ್ಳದೇ ಅವರನ್ನು ಏಕವಚನದಲ್ಲಿ ಸಂಬೋಧಿಸಿ ಮಾತನಾಡುವುದು ಖೂಬಾ ಅವರಿಗೆ ಶೋಭೆ ತಯರುವಂಥದಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ ಹೇಳಿದರು. ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶನಿವಾರ ಸಂಸದ ಸಾಗರ್ ಖಂಡ್ರೆ ಅವರು ಸುಕ್ಷೇತ್ರ ಪಾಪನಾಶ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಯ ಚಾಲನೆ ನೀಡುವ ಕಾರ್ಯಕ್ರಮ ಇಟ್ಟುಕೊಂಡಾಗ ಮಾಜಿ ಕೇಂದ್ರ ಸಚಿವ ಖೂಬಾ ಹಾಗೂ ಬಿಜೆಪಿಯ ಶಾಸಕರು ಹಾಗೂ ಕಾರ್ಯಕರ್ತರು ಸೇರಿಕೊಂಡು ಹೋರಾಟ ಮಾಡಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಅಂದೆ ತರಾತುರಿಯಲ್ಲಿ ಪೂಜೆ ಮಾಡುವುದಾಗಿ ಅಭಿಷೇಕ್ ಮಾಡುವ ನೆಪದಲ್ಲಿ ಹೋರಾಟ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಸೋಮಶೇಖರ ಸಜ್ಜನ್ ಮಲ್ಲಿಕಾರ್ಜುನ ಸಿಕೇನಪುರೆ ಕೈಲಾಸ್ ಕೋಳೆಕರ್ ಬೀದರ್ ತಾಲ್ಲೂಕು ಅಧ್ಯಕ್ಷ ವೀರಶೆಟ್ಟಿ ಗೌಸಪುರೆ ಹುಮನಾಬಾದ್ ತಾಲ್ಲೂಕು ಅಧ್ಯಕ್ಷ ವೀರೇಶ ರಡ್ಡಿ ಮಹೇಶ ಕಾಪಸೆ ಇದ್ದರು.

Cut-off box - ಖೂಬಾಗೆ ಜೀವ ಬೆದರಿಕೆ ಕ್ರಿಮಿನಲ್ ಕೇಸ್ಗೆ ಆಗ್ರಹ (ಚಿತ್ರ ಇದೆ–ಸ್ವಾಮಿದಾಸ್ ಕೆಂಪೆನೋರ್) ಬೀದರ್: ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಅವರಿಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಕರ್ನಾಟಕ ಮೂಲನಿವಾಸಿಗಳ ಮಹಾಸಭಾ ಜಿಲ್ಲಾಧ್ಯಕ್ಷ ಸ್ವಾಮಿದಾಸ್ ಕೆಂಪೆನೋರ್ ಆಗ್ರಹಿಸಿದ್ದಾರೆ. ಮಾಜಿ ಕೇಂದ್ರ ಸಚಿವರಿಗೆ ನೇರವಾಗಿ ಬೆದರಿಕೆ ಹಾಕಿ ನಿನ್ನ ನಾಲಿಗೆ ಕಟ್ ಮಾಡುತ್ತೇನೆ ಕೈ-ಕಾಲು ಕಡಿದು ಹಾಕುತ್ತೇನೆ ಎಂದು ಅವಾಚ್ಯ ಹಿಂಸಾತ್ಮಕ ಹಾಗೂ ಬೆದರಿಕೆಯ ಭಾಷೆ ಬಳಸಿರುವುದು ಕಾನೂನುಬಾಹಿರ. ರಾಜಕೀಯ ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದಲ್ಲಿ ಸಹಜವಾದರೂ ಜೀವ ಬೆದರಿಕೆ ಹಿಂಸೆಗೆ ಪ್ರಚೋದನೆ ಹಾಗೂ ಸಾಮಾಜಿಕ ಜಾಲತಾಣದ ದುರುಪಯೋಗ ಸಹಿಸಲಾಗದ ಅಪರಾಧ ಎಂದು ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.