ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಿ ಸಂಧಾನಕ್ಕೆ ಒಂದಾದ ದಂಪತಿ

Published 24 ಫೆಬ್ರುವರಿ 2024, 4:34 IST
Last Updated 24 ಫೆಬ್ರುವರಿ 2024, 4:34 IST
ಅಕ್ಷರ ಗಾತ್ರ

ಬೀದರ್‌: ಹಿರಿಯ ಸಿವಿಲ್‌ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಕೆ.ಕನಕಟ್ಟೆ ಅವರು ರಾಜಿ ಸಂಧಾನದ ಮೂಲಕ ದಂಪತಿಯನ್ನು ಒಂದುಗೂಡಿಸಿದ್ದಾರೆ.

ಹುಮನಾಬಾದ್‌ ತಾಲ್ಲೂಕಿನ ಹಣಕುಣಿ ಗ್ರಾಮದ ಶಿವಪುತ್ರ ಪ್ರಭು ಇವರು 2022 ರಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಭಾಗ್ಯ ಅವರೊಂದಿಗೆ ಸಾಂಪ್ರದಾಯಿಕವಾಗಿ ಮದುವೆ ಮಾಡಿಕೊಂಡಿದ್ದರು. ಇಬ್ಬರಿಗೂ ಒಂದು ಮಗು ಇದೆ. ಗಂಡ ಬೈಯುವುದು, ಹೊಡೆಯುವುದು ಮಾಡುತ್ತಾರೆ ಎಂದು ಭಾಗ್ಯ ತವರು ಮನೆಯವರಿಗೆ ತಿಳಿಸಿದ್ದರು. ಅದರಂತೆ ಚಿಟಗುಪ್ಪ ಪೊಲೀಸ್‌ ಠಾಣೆಗೆ ಅವರ ಪೋಷಕರು ದೂರು ಕೊಟ್ಟಿದ್ದರು. ಎಸ್.ಕೆ.ಕನಕಟ್ಟೆ ಅವರು ನೋಟಿಸ್ ಜಾರಿ ಮಾಡಿ ದಂಪತಿಯನ್ನು ಎಂಟು ಸಲ ಪ್ರಾಧಿಕಾರಕ್ಕೆ ಕರೆಸಿ, ಕೌಟುಂಬಿಕ ಸಮಸ್ಯೆಗಳನ್ನು ಆಲಿಸಿ, ಬುದ್ಧಿಮಾತುಗಳನ್ನು ಹೇಳಿ ರಾಜಿ ಸಂಧಾನದ ಮೂಲಕ ಶುಕ್ರವಾರ ಅಂತಿಮವಾಗಿ ಒಂದುಗೂಡಿಸಿ ಕಳಿಸಿದ್ದಾರೆ.

ಪ್ರಾಧಿಕಾರದ ಸಿಬ್ಬಂದಿ ರಾಹುಲ್‌, ಆಕಾಶ ಸಜ್ಜನ, ಜೀವನ್‌, ಯೋಹಾನ, ನಾಗರಾಜ, ಪ್ರೀತಿ, ಈರಮ್ಮ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT