ಮಂಗಳವಾರ, ಜೂನ್ 2, 2020
27 °C

ಹುಮನಾಬಾದ್‌: ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ತಾಲ್ಲೂಕಿನ ಹಳ್ಳಿಖೇಡ (ಬಿ), ದುಬಲಗುಂಡಿ, ಅಮಿರಾಬಾದ ವಾಡಿ ಗ್ರಾಮದ ವಿವಿಧೆಡೆ ನಡೆದಿದ್ದ ಕಳ್ಳತನ ಪ್ರಕರಣಗಳಿಗೆ ಸಂಬಧಿಸಿದಂತೆ ಪೊಲೀಸರು ಶುಕ್ರವಾರ 5 ಜನ ಕಳ್ಳರನ್ನು ಬಂಧಿಸಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಕುಂಬಾರವಾಡಾದ ಶಿವಕುಮಾರ ದತ್ತಾತ್ರೇಯ ಪಂಚಾಳ, ನಾಮದೇವ ರಾಮೂಲು ಸೇಣಗೇರಿ, ಸಲ್ಮಾನ ಅಲ್ತಾಫ್ ಅಫ್ಸರಮಿಯಾ, ಮೈಲೂರಿನ ಅರುಣ ರಮೇಶ ಸ್ವಾಮಿ, ಬೀದರ್ ಬ್ಯಾಂಕ್ ಕಾಲೊನಿಯ ಅವಿನಾಶ ಶಿವರಾಜ ತೊರಣೆ ಹಾಗೂ ಆಭರಣ ಖರೀಸಿದ ಅಜಯ ಪಪ್ಪು ರಾಮಚಂದ್ರ ಹಾಗೂ ಪವನ ಲಕ್ಷ್ಮಣ ಬಂಧಿತರು.ಎಸ್ಪಿ ನಾಗೇಶ ಡಿ.ಎಲ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎ.ಬಿ ಮಹೇಶ್ವರಪ್ಪ, ಜೆ.ಎಸ್ ನ್ಯಾಮಗೌಡರ ನೇತೃತ್ವದಲ್ಲಿ ಹಳ್ಳಿಖೇಡ (ಬಿ) ಪಿಎಸ್‍ಐ ಮಹಾಂತೇಶ ಲೂಂಬಿ, ಪಿಎಸ್‍ಐ ರವಿಕುಮಾರ, ಸುಭಾಷ ಚಂದ್ರ, ಅಪರಾಧ ವಿಭಾಗದ ಪಿಎಸ್‍ಐ ಕಿರಣ ಧೋತ್ರೆ ಹಾಗೂ ಸಿಬ್ಬಂದಿಗಳಾದ ಭಗವಾನ, ಮಲ್ಲಪ್ಪ, ದೀಪಕ, ಶಿವಶರಣ, ನವೀನ, ವಿಶ್ವನಾಥ, ಸುನೀಲಕುಮಾರ, ಭೀಮಪ್ಪ, ರಮೇಶ, ಮಲ್ಲಯ್ಯ, ವಸಂತರಾವ ಮಲ್ಲಿನಾಥ, ದುಂಡಪ್ಪ ಅವರನ್ನು ಒಳಗೊಂಡ ತಂಡ ಆರೋಪಿಗಳನ್ನು ಬಂಧಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.