ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಕಲ್ಯಾಣ ಸಾಂಸ್ಕೃತಿಕ ರಾಜಧಾನಿಯಾಗಲಿ: ಬಸವರಾಜ ಪಾಟೀಲ ಸೇಡಂ

Last Updated 14 ಫೆಬ್ರುವರಿ 2020, 8:55 IST
ಅಕ್ಷರ ಗಾತ್ರ

ಬೀದರ್: ‘ಬಸವಕಲ್ಯಾಣ ಪಟ್ಟಣವು ಕಲ್ಯಾಣ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಬೇಕು ಎನ್ನುವುದು ನಾಡಿನ ಜನರ ಆಶಯವಾಗಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ’ ಎಂದು ಕಲ್ಯಾಣ ಕರ್ನಾಟಕದ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಹೇಳಿದರು.

ಇಲ್ಲಿಯ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಅಕ್ಕಮಹಾದೇವಿ ಮಹಿಳಾ ಪತ್ತಿನ ಸಹಕಾರ ಸಂಘ ಹಾಗೂ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಿ ಸ್ವೀಕರಿಸಿ ಅವರು ಮಾತನಾಡಿದರು.

‘ಸರ್ಕಾರ ನನ್ನನ್ನು ಗುರುತಿಸಿ ಈ ಬಹುದೊಡ್ಡ ಜವಾಬ್ದಾರಿ ನೀಡಿದೆ. ಆ ನಂಬಿಕೆ ನಾನು ಖಂಡಿತ ಉಳಿಸಿಕೊಳ್ಳುತ್ತೇನೆ’ ಎಂದು ಆತ್ಮವಿಶ್ವಾಸದ ನುಡಿಗಳನ್ನು ಆಡಿದರು.

‘ನಾವು ಯಾವುದೇ ಫಲಾಪೇಕ್ಷೆ ಬಯಸದೇ ಪ್ರಾಮಾಣಿಕವಾಗಿ ಕಾಯಕ ಮಾಡಬೇಕು. ದೇವರು ಫಲ ತಾನಾಗಿಯೇ ಕೋಡುತ್ತಾನೆ. ಸನ್ಮಾನಗಳು ಮನುಷ್ಯನ ಜವಾಬ್ದಾರಿ ಹೆಚ್ಚಿಸುತ್ತವೆ’ ಎಂದು ನುಡಿದರು.

ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ, ಕರ್ನಾಟಕ ಜಾನಪದ ಪರಿಷತ್ ಕಲ್ಯಾಣ ಕರ್ನಾಟಕದ ಸಂಯೋಜಕ ಜಗನ್ನಾಥ ಹೆಬ್ಬಾಳೆ, ರಾಷ್ಟ್ರೀಯ ಜನಪದ ಬುಡಕಟ್ಟು ಕಲಾ ಪರಿಷತ್ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ, ಶಿವಶರಣಪ್ಪ ಗಣೇಶಪುರ, ವಿ.ಎಂ.ಡಾಕುಳಗೆ, ಪ್ರಕಾಶ ಕನ್ನಾಳೆ, ಲಿಂಗಾಯತ ಅಭಿವೃದ್ಧಿ ಸಂಘದ ಬಿ.ಜಿ.ಶೆಟಕಾರ, ಶಂಕರರಾವ್ ಹೊನ್ನಾ, ನಿಜಲಿಂಗಪ್ಪ ತಗಾರೆ, ವೀರಶೆಟ್ಟಿ ಮಣಗೆ, ಮಹಾನಂದಾ ಮಡಕಿ, ಎಂ.ಜಿ.ಗಂಗನಪಳ್ಳಿ, ಮಡಿವಾಳಪ್ಪ, ಮೀರಾ ಖೇಣಿ, ಸುನೀತಾ ಕೂಡ್ಲಿಕರ್, ಸವಿತಾ ಸಾಕೋಳೆ, ಮಹಾರುದ್ರ ಡಾಕುಳಗೆ, ಸಾವಿತ್ರಿಬಾಯಿ ಹೆಬ್ಬಾಳೆ, ಮಲ್ಲಮ್ಮ ಸಂತಾಜಿ, ಎಸ್.ಬಿ.ಕುಚಬಾಳ, ಶ್ರೀಕಾಂತ ಪಾಟೀಲ ಹಾಗೂ ಬಸವರಾಜ ಹೆಗ್ಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT