ಬುಧವಾರ, ನವೆಂಬರ್ 30, 2022
21 °C

ಐಟಿಐ ಕಾಲೇಜಿನಲ್ಲಿ ಆಯುಧ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ತಾಲ್ಲೂಕಿನಾದ್ಯಂತ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಂಗಳವಾರ ಆಯುಧ ಪೂಜೆ ನಡೆಯಿತು. ಬುಧವಾರ ಎಲ್ಲರೂ ಹೊಸ ಬಟ್ಟೆ ಧರಿಸಿ ದೇವಿ ಪೂಜೆ ಜತೆಗೆ ಪರಸ್ಪರ ಬನ್ನಿ ಹಂಚಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.

ಪಟ್ಟಣದ ಹೊರ ವಲಯದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಯಂತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಉನ್ನತಿ ಎಂಟರ್ಪ್ರೈಸಸ್ ಆಯೋಜಿಸಿದ 1 ತಿಂಗಳ ಸಂವಹನ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಡಾ. ಸಂಜೀವಕುಮಾರ ಜುಮ್ಮಾ ಮಾತನಾಡಿದರು. ಪ್ರಾಂಶುಪಾಲ ಓಂಪ್ರಕಾಶ ದಡ್ಡೆ, ಪತ್ರಕರ್ತ ಮನ್ಮಥಪ್ಪ ಸ್ವಾಮಿ, ಹಿರಿಯ ಪತ್ರಕರ್ತ ಶರಣಪ್ಪ ಚಿಟ್ಮೆ, ಕಿರಿಯ ತರಬೇತಿ ಅಧಿಕಾರಿ ಸಿದ್ದಪ್ಪ ಬಾವುಗೆ, ಸಂಪನ್ಮೂಲ ವ್ಯಕ್ತಿ ಜಾನ್‌ಸನ್ ಮಾತನಾಡಿದರು.

ಪ್ರಾಂಶುಪಾಲ ಶಿವಶಂಕರ ಟೋಕರೆ ಅಧ್ಯಕ್ಷತೆ ವಹಿಸಿದರು. ಆಡಳಿತಾಧಿಕಾರಿ ಮಿರ್ಜಾ ಅಸದುಲ್ಲಬೇಗ್, ತರಬೇತಿದಾರ ಅಜಮಪಾಶಾ, ಸತೀಶ್ ಗಂದಿಗೂಡೆ, ಅಶೋಕ, ಜಗನ್ನಾಥ ಗಡ್ಡೆ, ಚಂದ್ರಮೋಹನ, ಮುದಬ್ಬೀರ್, ಕಿರಣ, ಸಂಗಮೇಶ ಮರಖಲೆ, ಸತೀಶ ಬೆಳ್ಳೂರೆ, ಚಂದ್ರಕಾಂತ ಹುಲಸೂರೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು