ಬಸವಕಲ್ಯಾಣ: ತಾಲ್ಲೂಕಿನ ಧನ್ನೂರ (ಆರ್) ಗ್ರಾಮದ ಹಳ್ಳದಲ್ಲಿ ಮಳೆ ನೀರಿನೊಂದಿಗೆ ಮಂಗಳವಾರ ಕೊಚ್ಚಿ ಹೋಗಿದ್ದ ಯುವಕ ಮಲ್ಲಪ್ಪ (26) ಎರಡನೇ ದಿನವೂ ಪತ್ತೆ ಆಗಲಿಲ್ಲ.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿ ಶಾಮಕ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಪ್ರವೀಣ ನೇತೃತ್ವದಲ್ಲಿ ಎರಡನೇ ದಿನವೂ ಶೋಧ ಕಾರ್ಯ ನಡೆಯಿತು. ಡ್ರೋಣ್ ಮೂಲಕವೂ ಇಡೀ ಹಳ್ಳದಲ್ಲಿ ಶೋಧಿಸಲಾಯಿತು. ಆದರೂ, ಯುವಕ ಎಲ್ಲಿಯೂ ಸಿಗಲಿಲ್ಲ ಎನ್ನಲಾಗಿದೆ.
ತಹಶೀಲ್ದಾರ್ ಶಾಂತಗೌಡ ಬಿರಾದಾರ ಮತ್ತಿತರೆ ಅಧಿಕಾರಿಗಳು ಸಹ ಸ್ಥಳದಲ್ಲಿದ್ದು ಶೋಧ ಕಾರ್ಯ ಚುರುಕುಗೊಳಿಸಿದರು. ಎರಡನೇ ದಿನವೂ ಯುವಕ ಪತ್ತೆಯಾಗದ ಕಾರಣ ಪಾಲಕರ ಮತ್ತು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.