ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟಾ ಚಲಾವಣೆಗೆ ನಿರ್ಧಾರ

Last Updated 10 ಏಪ್ರಿಲ್ 2021, 3:28 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಉಪ ಚುನಾವಣೆಯಲ್ಲಿ ನಗರದ 11 ನೇ ವಾರ್ಡ್‌ನ ಮಾದಿಗ ಸಮಾಜದ ಮತದಾರರು ನೋಟಾ ಚಲಾವಣೆಗೆ ನಿರ್ಧರಿಸಲಾಗಿದೆ’ ಎಂದು ಮಾದಿಗ ದಂಡೋರ ಹೋರಾಟ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಸಂಜೀವಕುಮಾರ ಸಂಗನೂರೆ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿದ ಅವರು,‘ಈ ವಾರ್ಡ್‌ನ ಬಿಜೆಪಿ ಪಕ್ಷದವರಾದ ನಗರಸಭೆ ಸದಸ್ಯ ಮಾರುತಿ ಲಾಡೆ ಅನಾರೋಗ್ಯದಿಂದ ಬಳಲುತ್ತಿದ್ದಾಗ ಆಸ್ಪತ್ರೆ ಖರ್ಚಿಗಾಗಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಹೊರತುಪಡಿಸಿ ಯಾರೂ ಸಹಾಯ ಮಾಡಲಿಲ್ಲ. ಅವರು ಮೃತಪಟ್ಟು 5 ದಿನಗಳಾದರೂ ಈ ಕ್ಷೇತ್ರದ ಅಭ್ಯರ್ಥಿ ಶರಣು ಸಲಗರ ಹಾಗೂ ಸಂಸದ ಭಗವಂತ ಖೂಬಾ ಹಾಗೂ ಇತರೆ ಮುಖಂಡರು ಅವರ ಮನೆಗೆ ಬಂದು ಕುಟುಂಬದ ಪರಿಸ್ಥಿತಿಯ ಬಗ್ಗೆ ವಿಚಾರಿಸಿಲ್ಲ. ಆದ್ದರಿಂದ ಈ ತೀರ್ಮಾನಕ್ಕೆ ಬರಲಾಗಿದೆ’ ಎಂದಿದ್ದಾರೆ.

‘ಈ ವಾರ್ಡ್‌ನವರು ಹಾಗೂ ತಾಲ್ಲೂಕಿನಲ್ಲಿನ ಮಾದಿಗ ಸಮಾಜದ 18 ಸಾವಿರ ಮತದಾರರು ಕೂಡ ನೋಟಾ ಚಲಾಯಿಸಬೇಕು ಎಂದು ಕೇಳಿಕೊಳ್ಳಲಾಗಿದೆ.

ಈ ಮೂಲಕ ಸಮಾಜದವರಾದ ಮಾರುತಿ ಲಾಡೆ ಅವರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ವಿನಂತಿಸಲಾಗಿದೆ. ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಈ ವೇಳೆ
ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT