ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಬೆಳೆ ಸಮೀಕ್ಷೆಗಾರರಿಗೆ ಸುರಕ್ಷಾ ಕವಚಕ್ಕೆ ಆಗ್ರಹ

Published 3 ಸೆಪ್ಟೆಂಬರ್ 2023, 5:43 IST
Last Updated 3 ಸೆಪ್ಟೆಂಬರ್ 2023, 5:43 IST
ಅಕ್ಷರ ಗಾತ್ರ

ಬೀದರ್‌: ಜಿಲ್ಲೆಯ ಬೆಳೆ ಸಮೀಕ್ಷೆಗಾರರಿಗೆ ಸುರಕ್ಷಾ ಕವಚ, ಸಾಧನಗಳನ್ನು ಒದಗಿಸಬೇಕೆಂದು ಬೆಳೆ ಸಮೀಕ್ಷೆಗಾರರು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಂಟಿ ಕೃಷಿ ನಿರ್ದೇಶಕ ಡಾ. ರತೇಂದ್ರನಾಥ ಸುಗೂರ ಅವರಿಗೆ ಸಲ್ಲಿಸಿ ಒತ್ತಾಯಿಸಿದ್ದಾರೆ.

ಬೆಳೆ ಸಮೀಕ್ಷೆ ಕೈಗೊಳ್ಳುವಾಗ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತಿವೆ. ವಿಷಜಂತುಗಳ ತೊಂದರೆ ಇದೆ. ಜೀವಕ್ಕೂ ಕುತ್ತು ಬರಬಹುದು. ಬೆಳೆ ಸಮೀಕ್ಷೆ ವೇಳೆ ಮೃತಪಟ್ಟರೆ ₹5 ಲಕ್ಷ ಪರಿಹಾರ ಕೊಡಬೇಕು. ಅಗತ್ಯ ಸುರಕ್ಷ ಸಾಧನಗಳನ್ನು ಒದಗಿಸಬೇಕು. ಕನಿಷ್ಠ ಗೌರವ ಧನ ಮಾಸಿಕ ₹10 ಸಾವಿರ ನಿಗದಿಪಡಿಸಬೇಕು. ಎಲ್ಲರಿಗೂ ಗುರುತಿನ ಚೀಟಿ ಕೊಡಬೇಕು. ಜಿಪಿಎಸ್‌ ನಕ್ಷೆ ವ್ಯವಸ್ಥೆ ಮಾಡಬೇಕು. ಉತ್ತಮ ಮೊಬೈಲ್‌, ಪವರ್‌ ಬ್ಯಾಂಕ್‌ ಒದಗಿಸಬೇಕು. ಹಿಸ್ಸಾ ಜಿಪಿಎಸ್‌ ವ್ಯವಸ್ಥೆ ಸರಿಪಡಿಸಬೇಕು ಎನ್ನುವುದು ಪ್ರಮುಖ ಬೇಡಿಕೆಗಳಾಗಿವೆ.

ಬೆಳೆ ಸಮೀಕ್ಷೆಗಾರರಾದ ಲೋಕೇಶ, ಬಸವರಾಜ ಕುಪ್ಪೆ, ಸಂಜುಕುಮಾರ, ವೀರಶೆಟ್ಟಿ, ಏಕನಾಥ ಮೇತ್ರೆ, ನಾಗಶೇಟ್ಟಿ, ಸಂತೋಷ, ಶ್ರೀಕಾಂತ, ಸುಂದರ, ರಮೇಶ, ಸೊಗೇಲ್‌, ದಾವುದ್‌ ಮಿಯ್ಯಾ, ನಾಗರಾಜ, ಕಲ್ಯಾಣಿ, ನರಸಪ್ಪ, ಪ್ರಕಾಶ, ಬಲಭೀಮ, ಮಧುಕರ, ಗುಂಡಪ್ಪ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT