ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯಾ ಕಲಬುರಗಿ–ಬೆಂಗಳೂರಿಗೆ ರೈಲು ಓಡಿಸಲು ಆಗ್ರಹ

Published 12 ಸೆಪ್ಟೆಂಬರ್ 2023, 16:02 IST
Last Updated 12 ಸೆಪ್ಟೆಂಬರ್ 2023, 16:02 IST
ಅಕ್ಷರ ಗಾತ್ರ

ಬೀದರ್‌: ‘ಸ್ಥಗಿತಗೊಂಡಿರುವ ವಾಯಾ ಕಲಬುರಗಿ ಮೂಲಕ ಸಂಚರಿಸುತ್ತಿದದ ಬೀದರ್‌–ಬೆಂಗಳೂರು ರೈಲು ಪುನಃ ಓಡಿಸಬೇಕು’ ಎಂದು ಬೀದರ್‌ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ, ಕಾರ್ಯದರ್ಶಿ ವಿರೇಂದ್ರ ಶಾಸ್ತ್ರಿ ಆಗ್ರಹಿಸಿದ್ದಾರೆ.

ಅವರು ಈ ಸಂಬಂಧ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಪತ್ರ ಬರೆದಿದ್ದಾರೆ. ವಾಯಾ ವಿಕಾರಾಬಾದ್‌ ಬದಲು ಕಲಬುರಗಿ ಮೂಲಕ ರೈಲು ಓಡಿಸಬೇಕೆನ್ನುವುದು ಈ ಭಾಗದ ಜನರ ದಶಕಗಳ ಬೇಡಿಕೆ ಈಡೇರಿತ್ತು. ಆದರೆ, ಕಲಬುರಗಿ ಭಾಗದ ಕೆಲವು ತಾಲ್ಲೂಕುಗಳವರ ವಿರೋಧದಿಂದ ಸ್ಥಗಿತಗೊಳಿಸಲಾಗಿದ್ದು, ಇದು ಖಂಡನಾರ್ಹ ಎಂದು ತಿಳಿಸಿದ್ದಾರೆ.

ಕಲಬುರಗಿ ಮೂಲಕ ಸಂಚರಿಸಿದರೆ ಈ ಭಾಗದ ಸರ್ವಾಂಗೀಣ ಪ್ರಗತಿಗೆ ಸಹಕಾರಿಯಾಗುತ್ತದೆ. 2ರಿಂದ 3 ಗಂಟೆ ಸಮಯವೂ ಉಳಿತಾಯವಾಗುತ್ತದೆ. ಜನರ ಹಿತದೃಷ್ಟಿ, ಪ್ರವಾಸೋದ್ಯಮ ಬೆಳವಣಿಗೆಯ ದೃಷ್ಟಿಕೋನದಿಂದ ರೈಲು ಕಲಬುರಗಿ ಮೂಲಕ ಸಂಚರಿಸಿದರೆ ಉತ್ತಮ. ಆ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT