ಬುಧವಾರ, ನವೆಂಬರ್ 30, 2022
17 °C

ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಮಾಣಪತ್ರ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಭರತ ಎಜುಕೇಶನ್ ಮತ್ತು ಚಾರಿಟಬಲ್ ಟ್ರಸ್ಟ್ ಹಾಗೂ ಭರತ ಆರ್ಟ್‌ ಗ್ಯಾಲರಿಯ ವತಿಯಿಂದ ಆನ್‌ಲೈನ್‌ ಮೂಲಕ ರಾಷ್ಟ್ರ ಮಟ್ಟದ ಎರಡನೇ ಚಿತ್ರಕಲಾ ಸರ್ಧೆ ಈಚೆಗೆ ನಡೆಯಿತು.

ಅತಿಥಿಗಳಾಗಿ ಹಿರಿಯ ಕಲಾವಿದ ಪ್ರಭಾಕರ, ಕಲಾವಿದರಾದ ಅನಿಲರಾಜ ದೊಡಮನಿ, ಜಾಶ್ವಾ ಅಜಯ, ರೊನಾಲ್ಡ್ ರೊನಿ, ವಸಂತ ಪಾಲ್ಗೊಂಡಿದ್ದರು.

ಆನ್‍ಲೈನ್ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ಕಲಾವಿದರಾದ ಜಸ್‌ಪ್ರೀತ್‌ ಮೋಹನಸಿಂಗ್, ಪ್ರಸಾದರಾವ್, ನಾಗರಾಜ ಕುಲಕರ್ಣಿ, ಛಾಯಾಕುಮಾರಿ, ನೌಶಿನ್ ಫಾತಿಮಾ, ಮೇರಿ ಶೈನಿ, ನವಮಿ, ಸ್ಮಿತಿ, ರೆಡ್ಸ್‌ನ್‌, ವಿಷ್ಣು ಪಿ. ಉಜ್ವಲ್. ಯು. ಪ್ರಥ್ವಿ ಕೆ. ಶ್ರೀಕೃಷ್ಣ ಎಸ್, ಯಶವಂತ, ರಾಮಚರಣ, ರವಿಕುಮಾರ, ವಿಷ್ಣು, ಝುಬಿಯಾ, ಶಿಬಾರಾಣಿ ಅವರಿಗೆ ಮಂಗಲಪೇಟೆಯ ರೋನಿ ಟುಟೊರಿಯಲ್ಸ್‌ನಲ್ಲಿ ಪ್ರಮಾಣಪತ್ರ ಪ್ರದಾನ ಮಾಡಲಾಯಿತು.

ಭರತ ಆರ್ಟ್ ಗ್ಯಾಲರಿಯ ಜೈಕುಮಾರ ಭಂಡೆ, ಇವ್ಯಂಜಲಿನ್‌ ಜೆ. ಆನಲೈನ್ ಮೂಲಕ ಚಿತ್ರಕಲಾ ಸ್ಪರ್ಧೆ ಆಯೋಜಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.