ಮಂಗಳವಾರ, ಆಗಸ್ಟ್ 9, 2022
20 °C

ನೂರು ಪುರೋಹಿತರಿಗೆ ಆಹಾರಧಾನ್ಯ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಹಾಗೂ ಪುರೋಹಿತ ಪರಿಷತ್ ವತಿಯಿಂದ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡದಲ್ಲಿ ಅರ್ಚಕರಿಗೆ ಆಹಾರಧಾನ್ಯ ಕಿಟ್‌ ವಿತರಿಸಲಾಯಿತು

ಬೀದರ್‌: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಹಾಗೂ ಪುರೋಹಿತ ಪರಿಷತ್ ವತಿಯಿಂದ ಬುಧವಾರ ಭಾಲ್ಕಿ ಹಾಗೂ ಹುಮನಾಬಾದ್‌ ತಾಲ್ಲೂಕಿನ ಪುರೋಹಿತರಿಗೆ ಆಹಾರ ಕಿಟ್ ವಿತರಿಸಲಾಯಿತು.

ಭಾಲ್ಕಿ ಹಾಗೂ ಹುಮನಾಬಾದ್‌ ತಾಲ್ಲೂಕಿನಲ್ಲಿ ತಲಾ 40 ಪುರೋಹಿತರಿಗೆ ಹಾಗೂ ಬೀದರ್‌ನಲ್ಲಿ 20 ಜನರಿಗೆ ಸೇರಿ ಒಟ್ಟು ನೂರು ಪುರೋಹಿತರಿಗೆ ಕಿಟ್‌ ವಿತರಣೆ ಮಾಡಲಾಯಿತು.

ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ದೀಕ್ಷಿತ, ಉಪಾಧ್ಯಕ್ಷ ಅಕ್ಷಯ್ ದೀಕ್ಷಿತ, ಕಾರ್ಯದರ್ಶಿ ಗಿರಿಧರ ಜೋಶಿ, ಖಜಾಂಚಿ ಅನಂತ ಜೋಶಿ, ನಿರ್ದೇಶಕರಾದ ಪ್ರವೀಣ ಜೋಶಿ, ಸಚಿನ್ ಜೋಶಿ, ಶಿವಕುಮಾರ ಭಟ್ ಹಾಗೂ ಗಜಾನನ ಜೋಶಿ, ಶ್ರೀನಿವಾಸ ಕುಲಕರ್ಣಿ ಹಾಗೂ ವರುಣ ಜೋಶಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು