ಶನಿವಾರ, ಜೂನ್ 25, 2022
28 °C
ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆಯಿಂದ ಮಾನವೀಯ ಕಾರ್ಯ

ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಆಹಾರಧಾನ್ಯ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಚಿಕ್ಕಪೇಟದ ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆಯ ವತಿಯಿಂದ ಲಾಕ್‌ಡೌನ್‌ ಕಾರಣ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರಧಾನ್ಯದ ಕಿಟ್‌ ವಿತರಿಸಲಾಯಿತು.

ಕಾರ್ಮಿಕರು, ನಿರ್ಗತಿಕರು, ವಿಧವೆಯರು, ಅಂಗವಿಕಲರು ಮಾನಸಿಕ ಅಸ್ವಸ್ಥರು ಹಾಗೂ ಆಟೊ ಚಾಲಕರಿಗೆ ಆಹಾರಧಾನ್ಯದ ಕಿಟ್‌ ವಿತರಿಸಲಾಯಿತು. ನಗರದ ಲೇಬರ್ ಕಾಲೊನಿ, ಪಕ್ಕಲವಾಡ, ಶಹಾಗಂಜ್, ಬೀದರ್‌ ತಾಲ್ಲೂಕಿನ ದದ್ದಾಪೂರ, ಸೋಲಪುರ, ಔರದ್ ತಾಲ್ಲೂಕಿನ ಹೆಡಗಾಪುರ, ಕೊಳ್ಳೂರ ಮತ್ತು ಕರಂಜಿ (ಬಿ) ಗ್ರಾಮಗಳ 400 ಫಲಾನುಭವಿಗಳಿಗೆ ಕಿಟ್‌ ಕೊಡಲಾಯಿತು.

ಬೀದರ್‌ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶರತಕುಮಾರ ಅಭಿಮಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕ ಜೇಮ್ಸ್ ಪೌಲ್ ಅಧ್ಯಕ್ಷತೆ ವಹಿಸಿದ್ದರು. ಫಾದರ್ ವಿಮಲ್ ಆ್ಯಂಡ್ರು ಪ್ರಾಸ್ತಾವಿಕವಾಗಿ ಮಾತನಾಡಿದರು.

ನೆಲ್ಸನ್ ರಾಚೆ, ಡ್ಯಾನಿಯಲ್ ಸಾಗರ, ಪ್ರಭಾಕರ, ಜಾನ್ಸನ್, ಸೊಲೊಮನ್, ಡ್ಯಾನಿಯಲ್ ಮೇತ್ರೆ, ಪವಿತ್ರಾ, ಎಸ್ತೇರ್, ಸಂತೋಷ, ಗೀತಾ, ಸೀಮಪ್ಪ, ಲೋಕೇಶ ಇದ್ದರು.

ಅವಿನಾಶ ನಿರೂಪಿಸಿದರು. ನಳಿನಿ ಸ್ವಾಗತಿಸಿದರು. ರವಿಕುಮಾರ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು