ಶನಿವಾರ, ಜೂನ್ 25, 2022
28 °C
ಖಾಸಗಿ ಶಾಲೆಗಳ ಒಂದು ಸಾವಿರ ಶಿಕ್ಷಕರಿಗೆ ಕಿಟ್ ವಿತರಿಸುವ ಗುರಿ: ಕೊಳ್ಳೂರ

ಬೀದರ್: 75 ಶಿಕ್ಷಕರಿಗೆ ಆಹಾರಧಾನ್ಯ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಬೆಂಗಳೂರಿನ ಚಿಂತಕ ಸೂಲಿಬೆಲೆ ಚಕ್ರವರ್ತಿ ನೇತೃತ್ವದ ಯುವ ಬ್ರಿಗೇಡ್ ಇಲ್ಲಿಯ ಪ್ರತಾಪನಗರದ ಜನಸೇವಾ ಶಾಲೆಯಲ್ಲಿ ಖಾಸಗಿ ಶಾಲಾ ಶಿಕ್ಷಕರಿಗೆ ಆಹಾರಧಾನ್ಯ ಕಿಟ್ ವಿತರಿಸಿತು.

ಬ್ರಿಗೇಡ್ ಪದಾಧಿಕಾರಿಗಳು ಜಿಲ್ಲೆಯ ವಿವಿಧ ಖಾಸಗಿ ಶಾಲೆಗಳ 75 ಜನ ಶಿಕ್ಷಕರಿಗೆ ಒಟ್ಟು ₹2 ಲಕ್ಷ ಮೌಲ್ಯದ ತಲಾ 10 ಕೆ.ಜಿ ಅಕ್ಕಿ, 2 ಕೆ.ಜಿ ಗೋಧಿ ಹಿಟ್ಟು, 2 ಕೆ.ಜಿ. ತೊಗರಿ ಬೇಳೆ, 2 ಕೆ.ಜಿ ರವೆ, 2 ಕೆ.ಜಿ ಸಕ್ಕರೆ ಹಾಗೂ 1 ಕೆ.ಜಿ ಸಿಹಿ ಎಣ್ಣೆ ಒಳಗೊಂಡ ‘ಗುರು ಗೌರವ’ ಕಿಟ್ ವಿತರಣೆ ಮಾಡಿದರು.

ಕೋವಿಡ್ ಶಿಕ್ಷಣ ಕ್ಷೇತ್ರದ ಮೇಲೂ ತೀವ್ರ ಪರಿಣಾಮ ಉಂಟು ಮಾಡಿದೆ. ಬಹಳಷ್ಟು ಖಾಸಗಿ ಶಾಲೆಗಳು ಮುಚ್ಚಿ ಹೋಗಿವೆ. ಸಾವಿರಾರು ಶಿಕ್ಷಕರು ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ತೀವ್ರ ಕಳವಳ ವ್ಯಕ್ತಪಡಿಸಿದರು.

ಕೋವಿಡ್‍ನಿಂದ ತೊಂದರೆಗೆ ಒಳಗಾದ ಶಿಕ್ಷಕರಿಗೆ ಯುವ ಬ್ರಿಗೇಡ್ ನೆರವಿನ ಹಸ್ತ ಚಾಚಿರುವುದು ಪ್ರಶಂಸ ನೀಯವಾಗಿದೆ ಎಂದು ತಿಳಿಸಿದರು.

ಯುವ ಬ್ರಿಗೇಡ್ ಕಲಬುರ್ಗಿ ವಿಭಾಗ ಸಂಚಾಲಕ ಶ್ರೀಕಾಂತ ಕೊಳ್ಳೂರ ಮಾತನಾಡಿ, ಯುವ ಬ್ರಿಗೇಡ್ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.

ಕೋವಿಡ್‍ನಿಂದ ತೊಂದರೆಯಲ್ಲಿ ರುವ ಖಾಸಗಿ ಶಾಲಾ ಶಿಕ್ಷಕರಿಗೆ ನೆರವಾಗಲು ಆಹಾರಧಾನ್ಯ ಕಿಟ್ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಖಾಸಗಿ ಶಾಲೆಗಳ ಒಟ್ಟು ಒಂದು ಸಾವಿರ ಶಿಕ್ಷಕರಿಗೆ ಕಿಟ್ ವಿತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಬಿ.ಎಸ್. ಕುದರೆ ಅಧ್ಯಕ್ಷತೆ ವಹಿಸಿದ್ದರು. ವಿಕಾಸ ಅಕಾಡೆಮಿ ಜಿಲ್ಲಾ ಘಟಕದ ಅಧ್ಯಕ್ಷ ಕರ್ನಲ್ ಶರಣಪ್ಪ ಸಿನೇನಪುರ, ಜನಸೇವಾ ಶಾಲೆಯ ಆಡಳಿತ ಮಂಡಳಿ ಸದಸ್ಯ ಶಿವಲಿಂಗಪ್ಪ ಜಲಾದೆ, ಯುವ ಬ್ರಿಗೇಡ್‍ನ ಪ್ರಶಾಂತ ವಡ್ಡನಕೇರಾ, ಸಂತೋಷ ಮಂಗಳೂರೆ, ರಾಜು ವಡ್ಡಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು