ಬೀದರ್: ಇಲ್ಲಿಯ ವಾಲಿ ಶ್ರೀ ಆಸ್ಪತ್ರೆಯಲ್ಲಿ ಬುಧವಾರ ಕೇಕ್ ಕತ್ತರಿಸುವ ಮೂಲಕ ವೈದ್ಯರ ದಿನ ಆಚರಿಸಲಾಯಿತು.

ಕೇಕ್ ಕತ್ತರಿಸಿ ಕಾರ್ಯಕ್ರಮ ಉದ್ಘಾಟಿಸಿದ ಆಸ್ಪತ್ರೆಯ ನಿರ್ದೇಶಕ ಡಾ. ರಾಜಶೇಖರ ಸೇಡಂಕರ್ ಮಾತನಾಡಿ, ವೈದ್ಯ ವೃತ್ತಿ ಎಲ್ಲ ವೃತ್ತಿಗಳಲ್ಲೇ ಶ್ರೇಷ್ಠವಾದದ್ದು ಎಂದು ಬಣ್ಣಿಸಿದರು.

ಕೋವಿಡ್ 19 ಸೋಂಕಿನ ಸಂಕಟದ ಸಂದರ್ಭದಲ್ಲಿ ವೈದ್ಯರ ಜವಾಬ್ದಾರಿ ಹೆಚ್ಚಾಗಿದೆ. ಸುರಕ್ಷತಾ ಕ್ರಮಗಳನ್ನು ಅನುಸರಿಸುವುದರೊಂದಿಗೆ ರೋಗಿಗಳ ಜೀವ ಉಳಿಸಬೇಕಾಗಿದೆ ಎಂದು ಹೇಳಿದರು.

ಕೋವಿಡ್ ಸೋಂಕಿನ ಪರಿಣಾಮ ಎಲ್ಲ ಕ್ಷೇತ್ರಗಳ ಮೇಲೂ ಆಗಿದೆ. ಹೀಗಾಗಿ ಸ್ಥಳೀಯರು ಸ್ಥಳೀಯರನ್ನು, ಸ್ಥಳೀಯ ಉದ್ಯಮಗಳನ್ನು ಬೆಂಬಲಿಸಬೇಕಾಗಿದೆ. ಚಿಕಿತ್ಸಾ ವಿಚಾರದಲ್ಲೂ ಇದನ್ನು ಪಾಲಿಸಬೇಕಾಗಿದೆ. ಹೈದರಾಬಾದ್ಗೆ ಹೋಗದೆ, ಸ್ಥಳೀಯ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆಯಬೇಕಾಗಿದೆ ಎಂದು ತಿಳಿಸಿದರು.

ವಾಲಿ ಶ್ರೀ ಆಸ್ಪತ್ರೆಯು 11 ವರ್ಷಗಳಿಂದ ಜಿಲ್ಲೆಯ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಆಸ್ಪತ್ರೆಯು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿದೆ. ಆಸ್ಪತ್ರೆಯಲ್ಲಿ ನರರೋಗ, ಹೃದ್ರೋಗ, ಮೂತ್ರಪಿಂಡ ಹಾಗೂ ಕ್ಯಾನ್ಸರ್ಗೆ ಶಸ್ತ್ರಚಿಕಿತ್ಸೆ ಲಭ್ಯ ಇದೆ. ಜಿಲ್ಲೆಯ ರೋಗಿಗಳು ಇದರ ಲಾಭ ಪಡೆಯಬೇಕು ಎಂದು ಹೇಳಿದರು.

ಕೋವಿಡ್ 19 ಸೋಂಕಿನ ಸಂದರ್ಭದಲ್ಲಿ ವಾಲಿ ಶ್ರೀ ಆಸ್ಪತ್ರೆ ನಿರಂತರ ಕಾರ್ಯ ನಿರ್ವಹಿಸಿ ರೋಗಿಗಳಿಗೆ ಸೇವೆ ಒದಗಿಸಿದ ಪ್ರಯುಕ್ತ ಕರ್ನಾಟಕ ಕ್ಷತ್ರೀಯ ಒಕ್ಕೂಟ ಹಾಗೂ ಭಾಲ್ಕಿಯ ಸಂಭಾಜಿ ಬ್ರಿಗೇಡ್ ವತಿಯಿಂದ ಡಾ. ರಾಜಶೇಖರ ಸೇಡಂಕರ್ ಅವರನ್ನು ಸನ್ಮಾನಿಸಲಾಯಿತು. ಎರಡೂ ಸಂಘಟನೆಗಳಿಂದ ವೈದ್ಯರಿಗೆ ವಿತರಿಸಲು ತಲಾ 100 ಪಿಪಿಇ ಕಿಟ್ ಕೊಡುಗೆಯಾಗಿ ನೀಡಲಾಯಿತು.

ಕರ್ನಾಟಕ ಕ್ಷತ್ರೀಯ ಒಕ್ಕೂಟದ ಅಧ್ಯಕ್ಷ ಅಶೋಕ ಚೌಹಾಣ್, ಭಾರತೀಯ ವೈದ್ಯಕೀಯ ಸಂಘದ ಸ್ಥಳೀಯ ಶಾಖೆಯ ಅಧ್ಯಕ್ಷ ಡಾ.ವಿ.ವಿ.ನಾಗರಾಜ, ಹೃದ್ರೋಗ ತಜ್ಞರಾದ ಡಾ. ರಾಜಶೇಖರ ಪಾಟೀಲ, ಡಾ. ಖಾಜಾ ಮೈನೊದ್ದೀನ್, ಡಾ. ಮದನಾ ವೈಜಿನಾಥ, ಡಾ. ಶ್ರೀಕಾಂತ ಚಿಂಚೋಳಿಕರ್, ಆಸ್ಪತ್ರೆಯ ಡಾ. ವೆಂಕಟರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.