ಔರಾದ್: ತಾಲ್ಲೂಕಿನ ಲಾಧಾ ಕ್ರಾಸ್‌ನಿಂದ ಧುಪತಮಹಾಗಾಂವ್‌ಗೆ ಹೋಗುವ ಮಾರ್ಗದಲ್ಲಿನ ಹಳೆ ಸೇತುವೆ ಶಿಥಿಲಗೊಂಡು ವಾಹನ ಸವಾರರಿಗೆ ಭೀತಿ ಎದುರಾಗಿದೆ.
ಸುಮಾರು ಐದು ದಶಕದ ಹಳೆಯದಾದ ಸೇತುವೆ ಒಂದು ಭಾಗದ ಕಲ್ಲುಗಳು ಬಿದ್ದಿವೆ. ಕಳೆದ ವಾರ ಸುರಿದ ಮಳೆಯಿಂದ ಮತ್ತಷ್ಟು ಭಾಗ ಕುಸಿದಿದೆ. ಹೀಗಾಗಿ ನಿತ್ಯ ಈ ರಸ್ತೆ ಮೇಲೆ ಓಡಾಡುವ ಧುಪತಮಹಾಗಾಂವ್, ಬಾಬಳಿ, ಬಾಚೆಪಳ್ಳಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹಳೆ ಸೇತುವೆ ಪೂರ್ಣ ಶಿಥಿಲಗೊಂಡಿದೆ. ಯಾವಾಗ ಬೇಕಾದರೂ ಬೀಳಬಹುದು. ಸಾರಿಗೆ ಸಂಸ್ಥೆ ಬಸ್ ಓಡಿಸಲು ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಲೋಕೋಪಯೋಗಿ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರ ಧನರಾಜ ಮುಸ್ತಾಪುರ ತಿಳಿಸಿದ್ದಾರೆ.