ಶನಿವಾರ, ಏಪ್ರಿಲ್ 4, 2020
19 °C

ಮಕ್ಕಳಿಗೆ ವಿದ್ಯೆ ಜತೆ ಸಂಸ್ಕಾರ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: 'ಮಕ್ಕಳಿಗೆ ವಿದ್ಯೆ ಜತೆ ಉತ್ತಮ ಸಂಸ್ಕಾರ ಕಲಿಸುವುದು ಅಷ್ಟೇ ಮುಖ್ಯವಾಗಿದೆ' ಎಂದು ಹಣೆಗಾಂವ್ ಶಂಕರಲಿಂಗ ಶಿವಾಚಾರ್ಯರು ಹೇಳಿದರು.

ಪಟ್ಟಣದ ನವಚೇತನ ಗುರುಕುಲ ಶಾಲೆಯಲ್ಲಿ ಶನಿವಾರ ಪಾಲಕರಿಂದ ಮಕ್ಕಳಿಗೆ ಕೈತುತ್ತು ಉಣಿಸುವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

'ಪಾಲಕರು ತಮ್ಮ ಮಕ್ಕಳನ್ನು ಯಂತ್ರದಂತೆ ಬೆಳೆಸುತ್ತಿದ್ದೇವೆ. ಈ ಕಾರಣ ವೃದ್ಧಾಶ್ರಮಗಳು ಜಾಸ್ತಿಯಾಗುತ್ತಿವೆ' ಎಂದು ಕಳವಳ ವ್ಯಕ್ತಪಪಡಿಸಿದರು.

ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಸುಭಾಷಾ ಬಹೆನಜೀ ಮಾತನಾಡಿ 'ಶಾಲೆಗಳಲ್ಲಿ ವಿದ್ಯೆ ಜತೆ ಸಂಸ್ಕಾರ ಕಲಿಸಬೇಕು. ಮಹಾತ್ಮರ ವಿಚಾರಗಳು ಮಕ್ಕಳ ತಲೆಯಲ್ಲಿ ಹಾಕಬೇಕು' ಎಂದರು.

ಗುಂಡಯ್ಯ ಸ್ವಾಮಿ, ಪ್ರಭುರಾವ ಕಸ್ತೂರೆ, ಅಮೃತಪ್ಪ ಪಾರಾ, ಸಂಜುಕುಮಾರ ಶೆಟಕಾರ ಮತ್ತಿತರರು ಇದ್ದರು. ಜಗದೇವಿ ಜಾಂತೆ ಸ್ವಾಗತಿಸಿದರು. ಇದೇ ವೇಳೆ ಮಕ್ಕಳು ಪಾಲಕರನ್ನು ಪೂಜಿಸಿದರು. ಪಾಲಕರು ತಮ್ಮ ಮಕ್ಕಳಿಗೆ ಕೈತುತ್ತು ಉಣಬಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)