ಶುಕ್ರವಾರ, ಆಗಸ್ಟ್ 6, 2021
21 °C

ಔರಾದ್: ಎಂಟು ಸರಗಳ್ಳರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ಮಹಿಳೆಯೊಬ್ಬರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಎಂಟು ಜನರನ್ನು ಇಲ್ಲಿನ ಸಂತಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹1.20 ಲಕ್ಷ ಮೌಲ್ಯದ ಚಿನ್ನದ ಸರ, ಎರಡು ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ಬೀದರ್‌ ನಗರದ ಇರಾನಿ ಕಾಲೊನಿಯ ಮಹಮ್ಮದ್ ಅಲಿ, ಜಾಫರ್ ಅಜಮ್, ಗುಲಾಂ ರಸೂಲ್, ಹಸನ್ ನಯನ್, ಫರಿದಾ ಮಸ್ತಾನ, ನೀತು ಧೊಂಡಿಯಾ, ಸೇಲ್ವಾನಿ ಬೇಗಂ ಹಾಗೂ ಸಬಿಗುಲ್ ಹಸೇನ ಬಂಧಿತರು.

ಈ ಸರಗಳ್ಳರ ತಂಡ ಸಂತಪುರ ಗ್ರಾಮದ ಲಕ್ಷ್ಮಿ ದೇವಸ್ಥಾನದ ಹತ್ತಿರ ಮಂಗಳವಾರ ಅಂಬಿಕಾ ಎಂಬುವರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿತ್ತು. ಸುದ್ದಿ ತಿಳಿದ ಪೊಲೀಸರು ಇವರ ಬೆನ್ನಟ್ಟಿ ಸಿನಿಮೀಯ ಮಾದರಿಯಲ್ಲಿ ಬಂಧಿಸಿದ್ದಾರೆ.

ಡಿವೈಎಸ್ಪಿ ದೇವರಾಜ ಅವರ ನೇತೃತ್ವದಲ್ಲಿ ಸಿಪಿಐ ಟಿ.ರಾಘವೇಂದ್ರ, ಪಿಎಸ್ಐ ಪ್ರಭಾಕರ್ ಪಾಟೀಲ, ಸುವರ್ಣ ಹಾಗೂ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು