ಮಂಗಳವಾರ, ಜೂನ್ 15, 2021
23 °C
ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಸಂಖ್ಯೆ 3,748ಕ್ಕೆ ಏರಿಕೆ: ಜನರಲ್ಲಿ ಹೆಚ್ಚಿದ ಆತಂಕ

ಬೀದರ್‌ನಲ್ಲಿ ಕೊರೊನಾ ವೈರಸ್‌ ಸೋಂಕಿನಿಂದ 8 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಜಿಲ್ಲೆಯಲ್ಲಿ ಮಂಗಳವಾರ 102 ಮಂದಿಗೆ ಕೋವಿಡ್ ಸೋಂಕು ತಗುಲಿದೆ. ಕೋವಿಡ್‌ನಿಂದಾಗಿ ಮೂವರು ಮಹಿಳೆಯರು ಸೇರಿ ಒಟ್ಟು 8 ಜನ ಮೃತಪಟ್ಟಿದ್ದಾರೆ.

ಬೀದರ್‌ ನಗರದ ಇಡಗೇರಿಯ 65 ವರ್ಷದ ಮಹಿಳೆ ಜ್ವರ ಹಾಗೂ ಉಸಿರಾಟದ ತೊಂದರೆಯಿಂದ ಜುಲೈ 31 ರಂದು ಆಸ್ಪತ್ರೆಗೆ ದಾಖಲಾಗಿ, ಆಗಸ್ಟ್ 10ರಂದು ಮೃತಪಟ್ಟಿದ್ದರು. ಎಡೆನ್‌ ಕಾಲೊನಿಯ 62 ವರ್ಷದ ಪುರುಷ ಉಸಿರಾಟ ಸಮಸ್ಯೆಯಿಂದಾಗಿ ಆಗಸ್ಟ್ 7 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಆಗಸ್ಟ್ 17ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಪನ್ಸಾಲ್‌ ತಾಲೀಂನ 34 ವರ್ಷದ ಮಹಿಳೆ ವಿವಿಧ ಕಾಯಿಲೆಗಳಿಂದಾಗಿ ಆಗಸ್ಟ್ 15 ರಂದು ಆಸ್ಪತ್ರೆಗೆ ಬಂದಿದ್ದರು. 17ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಔರಾದ್ ತಾಲ್ಲೂಕಿನ ಸಂತಪುರದ 62 ವರ್ಷದ ಪುರುಷ ಅಧಿಕ ರಕ್ತದೊತ್ತಡದಿಂದ ಆಗಸ್ಟ್ 13 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 17ರಂದು ಸಾವಿಗೀಡಾಗಿದ್ದಾರೆ.

ಹುಮನಾಬಾದ್‌ ಟೀಚರ್‌ ಕಾಲೊನಿಯ 55 ವರ್ಷದ ಮಹಿಳೆ ಉಸಿರಾಟ ಸಮಸ್ಯೆಯಿಂದ ಆಗಸ್ಟ್ 3 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಆಗಸ್ಟ್ 7 ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಮಾಣಿಕನಗರದ 65 ವರ್ಷದ ಪುರುಷ ತೀವ್ರ ಉಸಿರಾಟ ತೊಂದರೆಯಿಂದ ಜುಲೈ 25 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಗಸ್ಟ್ 16 ರಂದು ಮೃತಪಟ್ಟಿದ್ದರು.

ಬಸವಕಲ್ಯಾಣದ 60 ವರ್ಷದ ಪುರುಷ ಜ್ವರದಿಂದಾಗಿ ಆಗಸ್ಟ್ 12 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಆಗಸ್ಟ್ 15ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಭಾಲ್ಕಿ ತಾಲ್ಲೂಕಿನ ಮದುಕಟ್ಟಿ ಗ್ರಾಮದ 24 ವರ್ಷದ ಯುವಕ ಅನೇಮಿಯಾದಿಂದಾಗಿ ಆಗಸ್ಟ್ 16ರಂದು ಆಸ್ಪತ್ರೆಗೆ ದಾಖಲಾಗಿದ್ದರು. 17 ರಂದು ಮೃತಪಟ್ಟಿದ್ದರು.

ಮೃತ ಎಲ್ಲ ಎಂಟು ಜನರ ಗಂಟಲು ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಮಂಗಳವಾರ ವರದಿ ಪಾಸಿಟಿವ್‌ ಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.