ನಾನು ಬಸವನಗರ ನಿವಾಸಿ. ನಿತ್ಯ 12ರಿಂದ 15 ಸಲ ವಿದ್ಯುತ್ ಕಡಿತವಾಗುತ್ತಿದೆ. ಹಗಲು ರಾತ್ರಿಯೆನ್ನದೆ ಕರೆಂಟ್ ಹೋಗುತ್ತಿದೆ. ಇದರಿಂದ ಜನಸಾಮಾನ್ಯರಿಗೆ ಬಹಳ ಸಮಸ್ಯೆಯಾಗುತ್ತಿದೆ.
–ವೀರಭದ್ರಪ್ಪ ಉಪ್ಪಿನ ಬಸವನಗರ, ನಿವಾಸಿ ಬೀದರ್
ಬೀದರ್ ನಗರದ ಕೆಲವು ಕಡೆಗಳಲ್ಲಿ ಫೀಡರ್ ಬದಲಿಸುವ ಕೆಲಸ ನಡೆಯುತ್ತಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಫೀಡರ್ ಬದಲಿಸುವ ಕೆಲಸ ಎರಡ್ಮೂರು ದಿನಗಳಲ್ಲಿ ಮುಗಿಯಲಿದೆ.
–ರಮೇಶ ಪಾಟೀಲ, ಕಾರ್ಯನಿರ್ವಾಹಕ ಎಂಜಿನಿಯರ್ ಜೆಸ್ಕಾಂ ಬೀದರ್