ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೃತವಾಣಿ: ಪರಿಸರ ಪ್ರೇಮ

ಶ್ರೀ ಬಸವಲಿಂಗ ಪಟ್ಟದ್ದೇವರು, ಹಿರೇಮಠ ಸಂಸ್ಥಾನ, ಭಾಲ್ಕಿ
Last Updated 14 ಜೂನ್ 2021, 16:55 IST
ಅಕ್ಷರ ಗಾತ್ರ

ಪರಿಸರ ಪ್ರೇಮ ನಮ್ಮ ಅಂತರಂಗ ತುಂಬಿಕೊಳ್ಳಬೇಕು. ಪರಿಸರ ರಕ್ಷಣೆಯಾದರೆ ನಮ್ಮ ರಕ್ಷಣೆಯಾಗುತ್ತದೆ. ನಿಸರ್ಗ ಸಂಪತ್ತು ನಮ್ಮೆಲ್ಲರ ಸಂಪತ್ತು. ವೃಕ್ಷಗಳನ್ನು ನಾವು ರಕ್ಷಣೆ ಮಾಡಿದರೆ ಅವು ನಮ್ಮನ್ನು ರಕ್ಷಣೆ ಮಾಡುತ್ತವೆ. ನಿಸರ್ಗ ದೇವನ ಸೃಷ್ಟಿ. ನಿಸರ್ಗವೆಲ್ಲ ಪರಮಾತ್ಮನ ಸ್ವರೂಪ. ಮರಗಿಡಬಳ್ಳಿಗಳಲ್ಲಿ ಶಿವನ ಸೌಂದರ್ಯ ಅಡಗಿದೆ. ‘ವನವೆಲ್ಲಾ ನೀವೇ ವನದೊಳಗಣ ತರುವೆಲ್ಲ ನೀವೇ ಚನ್ನಮಲ್ಲಿಕಾರ್ಜುನ ಸರ್ವಭತಿರನಾಗಿ ಮುಖದೋರಾ’ ಎಂದು ಅಕ್ಕಮಹಾದೇವಿ ತಾಯಿಯವರು ಪರಿಸರದಲ್ಲಿ ದೇವರನ್ನು ಕಂಡವರು. ವನದೊಳಗೆ ದೇವರ ಸ್ವರೂಪ ಕಂಡವರು.

ನಮ್ಮೆಲ್ಲರ ದೃಷ್ಟಿ ದೇವನ ದೃಷ್ಟಿಯಾದರೆ ಮಾತ್ರ ಮರಗಳ ರಕ್ಷಣೆಯಾಗುತ್ತದೆ. ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡಿದರೆ ನಿಜವಾಗಿಯೂ ದೇವರು ಕ್ಷಮಿಸಲಾರ. ಗಿಡಮರಗಳಲ್ಲಿ ಅವನು ತುಂಬಿಕೊಂಡಿದ್ದಾರೆ. ಮರ ಕಡಿಯುವುದೆಂದರೆ ದೇವನ ಅಂಗಾಂಗಗಳು ನಾಶ ಮಾಡಿದಂತೆ ಆಗುವುದಿಲ್ಲವೆ? ಹಸಿರು ದೇವನ ಹೊದಿಕೆ.

ನಮ್ಮ ಹುಟ್ಟು ಹಬ್ಬದಂದು ಗಿಡ ನೆಡಬೇಕು. ದೊಡ್ಡದು ಆಗುವತನಕ ರಕ್ಷಣೆ ಮಾಡಬೇಕು. ಮದುವೆ ವಾರ್ಷಿಕೋತ್ಸವವೇ, ಮಕ್ಕಳ ಹುಟ್ಟುಹಬ್ಬ, ಹಿರಿಯರ ಪುಣ್ಯಸ್ಮರಣೆ ಮುಂತಾದ ಸಂದರ್ಭದಲ್ಲಿ ಅವರ ಸವಿನೆನಹುನಲ್ಲಿ ಒಂದು ಸಸಿನೆಟ್ಟು ಮರ ಬೆಳೆಸಿದರೆ ಸಾವಿರ ಸಾವಿರ ಟನ್ ಆಮ್ಲಜನಕ ನೀಡುತ್ತದೆ. ಆದುದರಿಂದ ಮನುಕುಲ ಬುದಕುತ್ತದೆ. ಪರಿಸರದಲ್ಲಿ ದೇವರನ್ನು ಕಾಣುವ ದಿವ್ಯ ದೃಷ್ಟಿ ನಮ್ಮದಾಗಬೇಕು. ಆಗ ಪರಿಸರದ ರಕ್ಷಣೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT