ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಶ್ರೂಷಕ, ಶುಶ್ರೂಷಕಿಯ ಸ್ಮರಣೀಯ: ಶಾಸಕ ಈಶ್ವರ ಖಂಡ್ರೆ

Last Updated 15 ನವೆಂಬರ್ 2022, 13:48 IST
ಅಕ್ಷರ ಗಾತ್ರ

ಬೀದರ್‌: ‘ಕೋವಿಡ್‌ ಸಮಯದಲ್ಲಿ ದಾದಿಯರು, ಶುಶ್ರೂಷಕ, ಶುಶ್ರೂಷಕಿಯರು ರೋಗಿಗಳ ಕಾಳಜಿ ವಹಿಸಬೇಕಾಯಿತು. ಅವರ ಸೇವೆ ಮರೆಯಲಾಗದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ಈಶ್ವರ ಖಂಡ್ರೆ ಹೇಳಿದರು.

ನಗರದ ಶಿವಲಿಂಗ ವಿದ್ಯಾವರ್ಧಕ ಸಂಸ್ಥೆಯ ಎಂ.ಸಿ.ವಸಂತಾ ನರ್ಸಿಂಗ್ ಕಾಲೇಜಿನ ಬೆಳ್ಳಿ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರೀತಿ, ವಿಶ್ವಾಸ ಹಾಗೂ ನಿಸ್ವಾರ್ಥ ಭಾವನೆಯಿಂದ ಸೇವೆ ಮಾಡುವವರಲ್ಲಿ ದಾದಿಯರು, ಶುಶ್ರೂಷಕರು ಇಂದಿಗೂ ಮುಂಚೂಣಿಯಲ್ಲಿದ್ದಾರೆ ಎಂದರು.

ಶಾಸಕ ರಹೀಂ ಖಾನ್ ಮಾತನಾಡಿ,‘ಜನರ ಆರೋಗ್ಯ ಕಾಪಾಡುವಲ್ಲಿ ಹಾಗೂ ಅವರಿಗೆ ಸೇವೆ ನೀಡುವಲ್ಲಿ ನರ್ಸಿಂಗ್ ಕಾಲೇಜುಗಳ ಪಾತ್ರ ಬಹಳ ಮುಖ್ಯವಾಗಿದೆ. ವಸಂತಾ ಕಾಲೇಜಿನ ಅನೇಕ ವಿದ್ಯಾರ್ಥಿಗಳು ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಇದಕ್ಕೆ ಚಂದ್ರಕಾಂತ ಗದ್ದಗಿ ಅವರೇ ಕಾರಣಿಕರ್ತರು’ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಚಂದ್ರಕಾಂತ ಗದ್ದಗಿ ಮಾತನಾಡಿ,‘ಡಾ.ಅಂಬೇಡ್ಕರ್ ಅವರು ಹೇಳಿದಂತೆ ಗುಡಿ ಕಟ್ಟಿದರೆ 15-20 ಜನ ಭಿಕ್ಷುಕರು ಹುಟ್ಟುತ್ತಾರೆ. ಶಾಲೆ ಕಟ್ಟಿದರೆ 50 ರಿಂದ 100 ಜನ ವಿದ್ವಾಂಸರು ಜನ್ಮತಾಳುತ್ತಾರೆ ಎಂದಿದ್ದರು. ಅವರ ತತ್ವದಂತೆ ಸಮಾಜದ ಏಳಿಗೆಗೆ ಶಿಕ್ಷಣ ಸಂಸ್ಥೆ ಶ್ರಮಿಸುತ್ತಿದೆ’ ಎಂದು ತಿಳಿಸಿದರು.

ಶಿವಲಿಂಗ ವಿದ್ಯಾವರ್ಧಕ ಸಂಸ್ಥೆಯು 25 ವರ್ಷ ಪೂರೈಸಿದ ಕಾರಣ ಎಸ್‍.ಪಿ.ಸುಳ್ಳದ ಸಂಪಾದನೆಯಲ್ಲಿ ರಚಿತವಾದ ‘ಚಿನ್ನಚಂದ್ರ' ಎಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಬೆಂಗಳೂರಿನ ಡಾ. ವಿದ್ಯಾರಾಜು, ಎಸ್‍.ಪಿ ಸುಳ್ಳದ, ಕೋಡ್ಲಾದ ನಂಜುಂಡ ಸ್ವಾಮೀಜಿ, ಕಲಬುರಗಿಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಅಂಬಾರಾಯ ಎಸ್.ರುದ್ರವಾಡಿ, ಬೆಂಗಳೂರಿನ ಮಾಜಿ ಮೇಯರ್ ಸಂಪತ ರಾಜ್, ಸೇಡಂನ ಸಂಗಣ್ಣ ಜಿ.ಪೊಲೀಸ್ ಪಾಟೀಲ, ಕಲಬುರಗಿಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಧೂಳಪ್ಪ ದೊಡ್ಡಮನಿ, ಸಂಸ್ಥೆಯ ಉಪಾಧ್ಯಕ್ಷ ಡಾ.ಅನಮೋಲ್ ಮೋದಿ, ಕಾರ್ಯದರ್ಶಿ ಡಾ.ಚಿನ್ನಮ್ಮ ಗದ್ದಗಿ, ಸಂಸ್ಥೆಯ ಖಜಾಂಚಿ ಡಾ.ಪ್ರಿಯಾ ಗದ್ದಗಿ ಮೋದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT