ಹುಲಸೂರ: ಹುಲಸೂರ ತಾಲ್ಲೂಕಿನ ಬೇಲೂರು ಗ್ರಾಮದಲ್ಲಿ ಉರಿಲಿಂಗ ಪೆದ್ದಿ ಉತ್ಸವ ಮಾರ್ಚ್ 2 ಮತ್ತು 3 ರಂದು ನಡೆಯಲಿದ್ದು, ಶಿವಲಿಂಗೇಶ್ವರ ಶಿವಯೋಗಿಗಳ 55 ನೇ ಪುಣ್ಯಸ್ಮರಣೆ ಮತ್ತು ಪಂಚಾಕ್ಷರಿ ಸ್ವಾಮೀಜಿ ಅವರ ಸುವರ್ಣಾ ಮಹೋತ್ಸವ ಹಾಗೂ ಪ್ರಥಮ ಬೌದ್ಧ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಸಮಾಜ ಕಲ್ಯಾಣ ಸಚಿವ ಎಚ್. ಸಿ.ಮಹದೇವಪ್ಪ ಸಮ್ಮೇಳನದ ಉದ್ಘಾಟನೆ ಮಾಡುವರು. ಸಮ್ಮೇಳನಾಧ್ಯಕ್ಷರ ನುಡಿಯನ್ನು ಕಲಬುರಗಿಯ ಬೌದ್ಧ ಸಾಹಿತಿ ಪ್ರೊ.ಟಿ.ಎಂ.ಭಾಸ್ಕರ್ ಮಾಡಲಿದ್ದಾರೆ .ಶಂಕರಲಿಂಗ ಸ್ವಾಮೀಜಿ ಅವರ ಭಾರೊಡ ಹಾಗೂ ಅಭಂಗ ಪುಸ್ತಕ ಬಿಡುಗಡೆ ಇರಲಿದೆ. ಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ. ಧಮ್ಮ ಪ್ರಕಾಶ ಜ್ಯೋತಿ ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಸನ್ಮಾನ ನಡೆಯಲಿದೆ. ಹಾರಕೂಡದ ಚನ್ನವೀರ ಶಿವಾಚಾರ್ಯ, ಭಾತಂಬ್ರಾದ ಶಿವಯೋಗೇಶ್ವರ ಸ್ವಾಮೀಜಿ, ಅಣದೂರ ವರಜೋತಿ ಭಂತೆ ಸಾನ್ನಿಧ್ಯ ವಹಿಸಲಿದ್ದಾರೆ. ಪಂಚಾಕ್ಷರಿ ಸ್ವಾಮೀಜಿಗಳಿಗೆ ನಾಣ್ಯಗಳಿಂದ ತುಲಾಭಾರ ಸೇವೆ ನಡೆಯಲಿದೆ. ಉದ್ಘಾಟನೆಗೆ ಮುನ್ನ ಮೆರವಣಿಗೆ ಇರಲಿದೆ. ಎರಡು ದಿನಗಳ ಸಮ್ಮೇಳನ ನಡೆಯಲಿದೆ .

ಕಾರ್ಯಕ್ರಮ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರನ್ನಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಅಧ್ಯಕ್ಷರನ್ನಾಗಿ ಶಾಸಕ ಶರಣು ಸಲಗರ ಅವರನ್ನು ಆಯ್ಕೆ ಮಾಡಲಾಗಿದ್ದು ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರು, ಈ ಭಾಗದ ಎಲ್ಲ ಮಠಾಧೀಶರು, ಸಾಹಿತಿ, ಚಿಂತಕರು, ಗಣ್ಯರು ಪಾಲ್ಗೊಳ್ಳುವರು ಎಂದು ಕಾರ್ಯಾಧ್ಯಕ್ಷ ಜಗನ್ನಾಥ ಚಿಲ್ಲಾಬಟ್ಟೆ, ಸಂಯೋಜಕ ಸಾಹಿತಿ ಗವಿಸಿದ್ದಪ್ಪ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.