ಭಾಲ್ಕಿ ತಾಲ್ಲೂಕಿನ ಡಾವರಗಾಂವ ಗ್ರಾಮದ ಹೊಲವೊಂದರಲ್ಲಿ ಮಳೆ ನೀರು ತುಂಬಿಕೊಂಡು ಬೆಳೆ ಹಾಳಾಗಿರುವುದು
ಭಾಲ್ಕಿ ತಾಲ್ಲೂಕಿನ ನೆಲವಾಡ ಗ್ರಾಮದ ವಿನಾಯಕ ಪಾಟೀಲ ಅವರ ಹೊಲದಲ್ಲಿ ನೀರು ತುಂಬಿಕೊಂಡು ಬೆಳೆ ಹಾಳಾಗಿರುವುದನ್ನು ತೋರಿಸುತ್ತಿರುವ ರೈತರು
ತಹಶೀಲ್ದಾರ್ ಕಚೇರಿಗೆ ಎರಡು ಸಾರಿ ಮನವಿ ಸಲ್ಲಿಸಿದರೂ ಹೊಲಕ್ಕೆ ಅಧಿಕಾರಿಗಳು ಭೇಟಿ ನೀಡಿಲ್ಲ. ಬೆಳೆ ಹಾನಿ ಸಂಬಂಧ ವಿಮೆ ಕಂಪನಿಗೆ ದೂರು ಸಲ್ಲಿಸಿದರೂ ಪರಿಶೀಲಿಸಲು ಬಂದಿಲ್ಲ
ರಾಜಕುಮಾರ ಶೇರಿಕಾರ ರೈತ ಡಾವರಗಾಂವ
ರೈತರ ಬೆಳೆಗಳು ಸಂಪೂರ್ಣ ಹಾಳಾಗಿವೆ. ಪ್ರಾಣಿಗಳ ಆಹಾರಕ್ಕಾಗಿ ಕೂಡಿಟ್ಟಿದ್ದ ಕಣಕಿ ಹುಲ್ಲಿನ ಬಣವೆಗಳು ಸಹ ನೀರಿನಲ್ಲಿ ಕೊಚ್ಚಿ ಹೋಗಿವೆ. ಅವುಗಳಿಗೆ ಆಹಾರದ ವ್ಯವಸ್ಥೆ ಮಾಡಬೇಕು
ರಾಜಕುಮಾರ ತೊಗರೆ ರೈತ ನೆಲವಾಡ
ತಾಲ್ಲೂಕಿನ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು ಮಳೆಗೆ 33 ಸಾವಿರ ಎಕರೆ ಪ್ರದೇಶದ ಬೆಳೆ ಹಾನಿಯಾಗಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ₹ 11 ಕೋಟಿ ಪರಿಹಾರ ಸಿಗುವ ಸಾಧ್ಯತೆಯಿದೆ