ಕಮಲನಗರ: ತಾಲ್ಲೂಕಿನ ಕಳಗಾಪುರ, ಸೋನಾಳ, ಹೊರಂಡಿ ಹಾಗೂ ಕಮಲನಗರ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಭೇಟಿ ನೀಡಿ ಬೆಳೆಹಾನಿ ವೀಕ್ಷಿಸಿದರು.

ಸಚಿವರು ರೈತರಿಂದ ಮಾಹಿತಿ ಪಡೆದರು. ಸೇತುವೆ ಬಳಿ ಒಳ ಹರಿವು ವೀಕ್ಷಿಸಿದರು. ಕಬ್ಬು, ತೊಗರಿ ಮತ್ತು ಸೋಯಾಬಿನ್ ಬೆಳೆ ಹಾಳಾಗಿರುವುದನ್ನು ಪರಿಶೀಲಿಸಿದರು.

ಧನೆಗಾಂವ್ ಅಣೆಕಟ್ಟೆಯಿಂದ 6 ಗೇಟ್‍ಗಳ ಮೂಲಕ ಹೆಚ್ಚುವರಿ ನೀರನ್ನು ನದಿಗೆ ಬಿಟ್ಟಿದ್ದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ರಸ್ತೆ, ಸೇತುವೆ ಮತ್ತು ಅಪಾರ ಪ್ರಮಾಣದ ಬೆಳೆ ಹಾನಿಯಾಗಿರುವುದನ್ನು ಅವರು ಗಮನಿಸಿದರು. ಅಲ್ಲದೆ, ರೈತರಿಂದ ಆಹವಾಲು ಸ್ವೀಕರಿಸಿದರು.

‘ಜಿಲ್ಲೆಯಲ್ಲಿ ಮಳೆಯಿಂದ ಬೆಳೆಗಳು ಹಾಳಾಗಿವೆ. ರೈತರು ಸಂಕಷ್ಟದಲ್ಲಿದ್ದಾರೆ. ಸರ್ವೆ ಕಾರ್ಯ ಕೈಗೊಂಡು ಶೀಘ್ರವೇ ಪರಿಹಾರ ಬಿಡುಗಡೆಗೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು. ಈಗಾಗಲೇ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ಸರ್ವೆ ಮಾಡಿದೆ. ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ’ ಎಂದರು. ಜೆಇ ದೇವಾನಂದ ದೇಶಮುಖ, ಎಪಿಎಂಸಿ ಅಧ್ಯಕ್ಷ ರಾಮರಾವ ಜಾಧವ, ಮುಖಂಡ ರಾಹುಲ ಪಾಟೀಲ, ಶತ್ರುಘನ್, ರಾಜಕುಮಾರ, ಸತೀಶ, ಅನೀಲಕುಮಾರ, ದಿಲೀಪ ಚವಾಣ್ ಹಾಗೂ ವಿಜಯಕುಮಾರ ಪಾಟೀಲ ಇದ್ದರು.

35 ಸಾವಿರ ಹೆಕ್ಟೇರ್ ಬೆಳೆಹಾನಿ
ಔರಾದ್: ಒಂದು ವಾರ ನಿರಂತರವಾಗಿ ಸುರಿದ ಭಾರಿ ಮಳೆ ಹಾಗೂ ಮಾಂಜ್ರಾ ನದಿ ನೀರಿನ ಪ್ರವಾಹದಿಂದ ತಾಲ್ಲೂಕಿನಲ್ಲಿ 35 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ.

ಮೂರು ದಿನಗಳಿಂದ ಮಳೆ ನಿಂತರು ಸಹ ಮಾಂಜ್ರಾ ನದಿ ಪ್ರವಾಹ ಕಡಿಮೆಯಾಗಿಲ್ಲ. ಮಹಾರಾಷ್ಟ್ರದ ಧನೆಗಾಂವ್ ಜಲಾಶಯದಿಂದ ಹೆಚ್ಚುವರಿ ನೀರು ಹರಿ ಬಿಡುತ್ತಿರುವ ಕಾರಣ ಮಾಂಜ್ರಾ ನದಿ ಒಳ ಹರಿವು ಹೆಚ್ಚುತ್ತಲೇ ಇದೆ. ಹೀಗಾಗಿ ನದಿ ಪಾತ್ರದ ಹೆಡಗಾಪುರ, ನಿಟ್ಟೂರ್, ಧೂಪತಮಹಾಗಾಂವ್, ಮಣಿಗೆಂಪುರೆ, ಬಾಬಳಿ, ಲಾಧಾ, ಕೌಡಗಾಂವ್, ಬಲ್ಲೂರ್, ಕೌಠಾ (ಕೆ), ಕೌಠಾ (ಬಿ), ಕಂದಗೂಳ, ಗಡಿ ಕುಶನೂರ ಸೇರಿ ಹತ್ತಾರು ಗ್ರಾಮಗಳ ನೂರಾರು ಎಕರೆ ಜಮೀನು ಜಲಾವೃತವಾಗಿದೆ. ಇಲ್ಲಿಯ ಸೋಯಾ, ಕಬ್ಬು, ತೊಗರಿ ಬೆಳೆ ನೀರಿನಲ್ಲಿ ಕೊಚ್ಚಿ ಹೋಗಿದೆ.

‘ಭಾರಿ ಮಳೆ ಹಾಗೂ ಪ್ರವಾಹದಿಂದ ತಾಲ್ಲೂಕಿನಲ್ಲಿ ಕಟಾವಿಗೆ ಬಂದ ಸೋಯಾ ಬೆಳೆ ಸಂಪೂರ್ಣವಾಗಿ ಹಾಳಾಗಿದೆ. ತೊಗರಿ ಬೆಳೆಗೂ ಕುತ್ತು ಬಂದಿದೆ. ನದಿ ಪಾತ್ರದಲ್ಲಿ ಹೆಚ್ಚಿನ ಹಾನಿಯಾಗಿದೆ. ಸರ್ಕಾರ ಕೂಡಲೇ ಪ್ರವಾಹ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿ ತಕ್ಷಣ ಪರಿಹಾರ ಬಿಡುಗಡೆ ಮಾಡಬೇಕು’ ಎಂದು ರೈತ ಮುಖಂಡರಾದ ಶ್ರೀಮಂತ ಬಿರಾದಾರ, ಚನ್ನಬಸಪ್ಪ ಬಿರಾದಾರ ಆಗ್ರಹಿಸಿದ್ದಾರೆ.

‘ಮಳೆ ಹಾನಿ ಹಾಗೂ ಪ್ರವಾಹದಿಂದ ಉಂಟಾದ ಹಾನಿ ಕುರಿತು ಪ್ರಾಥಮಿಕ ಹಂತದ ಸರ್ವೆ ಆಗಿದೆ. ಕಮಲನಗರ, ಔರಾದ್ ತಾಲ್ಲೂಕು ಸೇರಿ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಪ್ರವಾಹದಿಂದ ಮಾಂಜ್ರಾ ನದಿ ಪಾತ್ರದ ಗ್ರಾಮಗಳಿಗೆ ಹೆಚ್ಚಿನ ಪರಿಣಾಮ ಆಗಿದೆ. ಈ ಕುರಿತು ಎರಡು ದಿನಗಳಲ್ಲಿ ಸರ್ವೆ ಮಾಡಿ ವರದಿ ಸಲ್ಲಿಸಲಾಗುವುದು’ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎ.ಕೆ. ಅನ್ಸಾರಿ ತಿಳಿಸಿದ್ದಾರೆ.

ತೇವಾಂಶ ಹೆಚ್ಚಳ: ಬೆಳೆನಾಶ ಭೀತಿ
ಹುಲಸೂರ: ಮಳೆ ಹಾಗೂ ಮಹಾರಾಷ್ಟ್ರದ ಜಲಾಶಯಗಳಿಂದ ಮಾಂಜ್ರಾ ನದಿಗೆ ನೀರು ಬಿಡಲಾಗಿದ್ದು, ನದಿ ಪಾತ್ರದ ಜಮೀನುಗಳು ಮುಳುಗಡೆಯಾಗಿವೆ.

ರೈತರ ಬೆಳೆ ಹಾಗೂ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದೆ. ಎರಡು ದಿನಗಳಿಂದ ನೀರಿನ ಪ್ರಮಾಣ ಕಡಿಮೆಯಾಗಿದೆ. ಆದರೆ, ತೇವಾಂಶದಿಂದ ಬೆಳೆಗಳು ಕೊಳೆಯುತ್ತಿವೆ.

‘ಎರಡು ದಿನಗಳಿಂದ ನೀರಿನ ಪ್ರಮಾಣ ಕಡಿಮೆಯಾಗಿದೆ. ಆದರೆ, ತೇವಾಂಶ ಕಡಿಮೆಯಾಗಿಲ್ಲ. ಇದರಿಂದ ಇರುವ ಅಲ್ಪಸ್ವಲ್ಪ ಬೆಳೆಯೂ ನಾಶವಾಗುವ ಭೀತಿ ಎದುರಾಗಿದೆ’ ಎಂದು ವಾಜರಖೇಡ ಗ್ರಾಮ ರೈತ ಶಿವರಾಜ ಮೂಳೆ ಆತಂಕ ವ್ಯಕ್ತಪಡಿಸಿದರು.

‘ಇಲ್ಲಿಯವರೆಗೂ ಸುಮಾರು 4605 ಹೆಕ್ಟೇರ್ ಬೆಳೆ ನಾಶವಾಗಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಇನ್ನೂ ಸಮೀಕ್ಷಾ ಕಾರ್ಯ ನಡೆಯುತ್ತಿದೆ. ಕೆಲ ದಿನಗಳ ಬಳಿಕ ಸ್ಪಷ್ಟ ಮಾಹಿತಿ ದೊರೆಯಲಿದೆ’ ಎಂದು ಹುಲಸೂರ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಮನಿಷಾ ಬಿರಾದಾರ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.