ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ: ಜಾನಪದ ಹೃದಯವಂತಿಕೆಯುಳ್ಳ ಕಲೆ

ನಿವೃತ್ತ ಎಂಜಿನಿಯರ್ ವಿಶ್ವನಾಥಪ್ಪ ಬಿರಾದಾರ ಅಭಿಮತ
Last Updated 9 ಫೆಬ್ರುವರಿ 2023, 6:49 IST
ಅಕ್ಷರ ಗಾತ್ರ

ಭಾಲ್ಕಿ: ‘ಜಾನಪದ ಕಲೆಯಲ್ಲಿ ಹೃದಯ ಶ್ರೀಮಂತಿಕೆ ಇದೆ’ ಎಂದು ನಿವೃತ್ತ ಎಂಜಿನಿಯರ್ ವಿಶ್ವನಾಥಪ್ಪ ಬಿರಾದಾರ ಹೇಳಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ತಾಲ್ಲೂಕು ಜಾನಪದ ಪರಿಷತ್ತಿನ ವತಿಯಿಂದ ನಡೆದ ಜಾನಪದ ಗಾಯನ ಸಂಭ್ರಮ ಮತ್ತು ನಿವೃತ್ತ ಅಧಿಕಾರಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ,‘ಜಾನಪದ ಸಾಹಿತ್ಯ ಮನಸ್ಸನ್ನು ಅರಳಿಸುತ್ತದೆ’ ಎಂದರು.

ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ವಸಂತ ಹುಣಸನಾಳೆ ಮಾತನಾಡಿ,‘ನಮ್ಮ ಸಂಸ್ಕೃತಿಯ ತಾಯಿ ಬೇರಾಗಿರುವ ಜನಪದ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ತಿಳಿಸಿದರು.

ಪ್ರೊ.ಶಂಭುಲಿಂಗ ಕಾಮಣ್ಣ ಹಾಗೂ ಮಲ್ಲಮ್ಮ ನಾಗನಕೇರೆ ಮಾತನಾಡಿದರು.

ಜನಪದ ಸಂಗೀತ ಕಲಾವಿದರು ಕಲೆ ಪ್ರದರ್ಶಿಸಿದರು.

ನಿವೃತ್ತ ಅಧಿಕಾರಿಗಳಾದ ಶಿವಕುಮಾರ ಘಂಟೆ, ಚಂದ್ರಶೇಖರ ಬಿರಾದಾರ, ಕಾಶಿನಾಥ ಭೂರೆ, ಹರಿದೇವ ಸುಕನಾಳೆ ದಂಪತಿಯನ್ನು ಸನ್ಮಾನಿಸಲಾಯಿತು.

ಜೈಕಾಂತ ಗಂಗೋಜಿ, ಬಸವರಾಜ ಮರೆ, ಅಶೋಕ ತಾಂಬೋಳೆ, ಉದ್ಯಮಿ ಗಫಾರ್ ಪಟೇಲರಿಗೆ ವಿಶೇಷ ಸನ್ಮಾನ ನಡೆಯಿತು. ಕಾರ್ಯಕ್ರಮದಲ್ಲಿ ಶರಣಪ್ಪ ಬಿರಾದಾರ, ರಮೇಶ ಮಾನಶೆಟ್ಟೆ, ವಿಠಲರಾವ್ ಮೇತ್ರೆ, ಜಯರಾಜ ದಾಬಶೆಟ್ಟೆ, ನಿರಂಜಪ್ಪ ಪಾತ್ರೆ, ಚಂದ್ರಕಾಂತ ಮಾಶೆಟ್ಟೆ, ಸುಭಾಷ ಹುಲಸೂರೆ, ಮುನಿರೋದ್ದಿನ್ ಮಾಸಿಮಾಡ, ಶಾಂತಯ್ಯಾ ಸ್ವಾಮಿ ಹಾಗೂ ರತ್ನಮ್ಮ ಹಾಲಕೂಡೆ ಇದ್ದರು.

ಅಶೋಕ ತಾಂಬೋಳೆ ಸ್ವಾಗತಿಸಿದರು. ಜೈಕಾಂತ ಗಂಗೋಜಿ ನಿರೂಪಿಸಿದರು. ಮಲ್ಲಮ್ಮಾ ನಾಗನಕೇರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT