ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾನಪದ ಜೀವನದ ಪ್ರತಿಬಿಂಬ’

Last Updated 8 ಅಕ್ಟೋಬರ್ 2022, 5:39 IST
ಅಕ್ಷರ ಗಾತ್ರ

ಕಮಲನಗರ: ‘ಜಾನಪದ ನಮ್ಮ ಜೀವನದ ಪ್ರತಿ ದರ್ಪಣ’ ಎಂದು ಸಾವಿತ್ರಿಬಾಯಿ ಜಾಧವ ಹೇಳಿದರು.

ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಜೈ ಭೀಮ ಗಾಯನ ಪಾರ್ಟಿ ವತಿಯಿಂದ ಕರ್ನಾಟಕ ಜಾನಪದ ಪರಿಷತ್ತು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಪ್ರಯೋಜಿತ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಗೀತ, ನಾಟಕಗಳು ಸಂಸ್ಕೃತಿಯನ್ನು ಶ್ರೀಮಂತಗೊಳಿಸುತ್ತವೆ. ಪ್ರದರ್ಶನಗಳ ಮೂಲಕ ಮಕ್ಕಳಿಗೆ ನಮ್ಮ ಭಾಗದ ಕುರಿತು ಅರಿವು ಮೂಡಿಸು ವ ಕೆಲಸ ಮಾಡಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಮನೋಜಕುಮಾರ ಬಿರಾದಾರ, ಜಗನ್ನಾಥ ಮೇತ್ರೆ, ರೇಖಾಬಾಯಿ ಕಾಂಬಳೆ, ಇಂದ್ರಾಬಾಯಿ ಕಮನಿವಾಡೆ ಹಾಗೂ ಗ್ರಾಮಸ್ಥರು ಇದ್ದರು.

ಜೈ ಭೀಮ ಗಾಯನ ಪಾರ್ಟಿ ತಂಡದ ವತಿಯಿಂದ ಪ್ರದರ್ಶನಗಳು ನಡೆದವು. ತುಕಾರಾಮ ವಾಗಮಾರೆ ತಬಲಾ, ಗಣಪತಿ ಕಾಂಬಳೆ ಹಾರ್ಮೋನಿಯಂ ನುಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT