ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುನಾನಕ ಆಸ್ಪತ್ರೆಯಲ್ಲಿ ಪ್ರತಿ ಗುರುವಾರ ಉಚಿತ ಒಪಿಡಿ: ಕಾಮೇಶ್ವರ ರಾವ್‌

Published 28 ಡಿಸೆಂಬರ್ 2023, 16:05 IST
Last Updated 28 ಡಿಸೆಂಬರ್ 2023, 16:05 IST
ಅಕ್ಷರ ಗಾತ್ರ

ಬೀದರ್‌: ‘ಬರುವ ಜನವರಿ 9ರಂದು ನಗರದ ಗುರುನಾನಕ ಸೂಪರ್‌ ಸ್ಪೆಷಾಲಿಟಿ ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೆಗಾ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಮೇಶ್ವರ ರಾವ್‌ ತಿಳಿಸಿದರು.

ಮೆಗಾ ಶಿಬಿರದ ನಂತರ ಪ್ರತಿ ಗುರುವಾರ ಆಸ್ಪತ್ರೆಯಲ್ಲಿ ಎಲ್ಲ ಹೊರ ರೋಗಿಗಳ (ಒಪಿಡಿ) ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುವುದು. ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದ ಏಳರಿಂದ ಎಂಟು ಜನ ತಜ್ಞ ವೈದ್ಯರು ಹಾಜರಿದ್ದು, ರೋಗಿಗಳ ಆರೋಗ್ಯ ತಪಾಸಣೆ ಮಾಡುವರು ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಕಿಡ್ನಿಯಲ್ಲಿ ಹರಳಿನ ಸಮಸ್ಯೆ ಉಂಟಾದರೆ ಈ ಹಿಂದೆ ಹೈದರಾಬಾದ್‌ಗೆ ಹೋಗಿ ಚಿಕಿತ್ಸೆ ಪಡೆಯಬೇಕಿತ್ತು. ಈಗ ಲೇಸರ್‌ ಚಿಕಿತ್ಸೆ ಸೌಲಭ್ಯ ನಮ್ಮ ಆಸ್ಪತ್ರೆಯಲ್ಲಿ ಕಲ್ಪಿಸಲಾಗಿದೆ. ತುರ್ತು ಸಂದರ್ಭದಲ್ಲಿ ಉಚಿತ ಆಂಬ್ಯುಲೆನ್ಸ್‌ ವ್ಯವಸ್ಥೆ ಇದೆ. ವಾಜಪೇಯಿ ಆರೋಗ್ಯ ಶ್ರೀ, ಯಶಸ್ವಿನಿ ಸೇರಿದಂತೆ ಸರ್ಕಾರದ ವಿವಿಧ ಕಾರ್ಡುಗಳನ್ನು ಹೊಂದಿದವರಿಗೆ ಉಚಿತ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಎಲ್ಲ ರೀತಿಯ ರೋಗಗಳಿಗೆ ಗುಣಮಟ್ಟದ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದರು.

ವೈದ್ಯರಾದ ಡಾ.ರಾಜಶೇಖರ ಸೇಡಂಕರ್‌, ಡಾ.ಲಿಂಗರಾಜ ಕಾಡಾದಿ, ಡಾ.ವಿನೋದ ಖೇಳಗಿ, ಡಾ.ಮದನಾ ವೈಜಿನಾಥ, ನಿತಿನ್‌ ಮಲಸೂರೆ, ಡಾ.ಶೇಖ್‌ ಸೈಫೊದ್ದೀನ್‌, ಡಾ.ಫಾತಿಮಾ ಚಂದಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT