ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎನ್‌ಡಿ ವಿದ್ಯಾರ್ಥಿಗಳಿಂದ ಸೌರಶಕ್ತಿಚಾಲಿತ ವಾಹನ

Last Updated 21 ಆಗಸ್ಟ್ 2020, 10:32 IST
ಅಕ್ಷರ ಗಾತ್ರ

ಬೀದರ್: ನಗರದ ಪ್ರತಿಷ್ಠಿತ ಜಿಎನ್‌ಡಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೌರಶಕ್ತಿಚಾಲಿತ ವಾಹನ ಸಿದ್ಧಪಡಿಸುವ ಮೂಲಕ ಗಮನ ಸೆಳೆಯುವ ಸಾಧನೆ ಮಾಡಿದ್ದಾರೆ.

ಕಾಲೇಜಿನ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ದತ್ತಾತ್ರಿ, ಬಳಿರಾಮ, ರಾಹುಲ್ ಮತ್ತು ಅಭಿಷೇಕ್ ಈ ಸಾಧನೆ ಮಾಡಿದವರು.

ಮಲ್ಟಿಫಾವರ್ಡ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (ಎಚ್ವಿಇ) ಎಂದು ಕರೆಯಲಾಗುವ ಈ ವಾಹನವು ಸೌರಶಕ್ತಿಯನ್ನು ಇಂಧನವಾಗಿ ಬಳಸುತ್ತದೆ. ನವೀಕರಿಸಲಾಗದ ಇಂಧನ ಕೊರತೆ ಇಡೀ ಜಗತ್ತನ್ನು ಕಾಡುತ್ತಿದೆ. ಹೀಗಾಗಿ ನವೀಕರಿಸಬಹುದಾದ ಇಂಧನ ಬಳಕೆ ಮುಂದಿನ ದಿನಗಳಲ್ಲಿ ಅನಿವಾರ್ಯವಾಗಲಿದೆ. ಪವನ ಶಕ್ತಿ, ಸೌರಶಕ್ತಿ ಮೊದಲಾದ ನವೀಕರಿಸಬಹುದಾದ ಶಕ್ತಿಗಳನ್ನು ಇಂಧನವಾಗಿ ಬಳಸುವ ವಾಹನಗಳ ಆವಿಷ್ಕಾರ ಹೆಚ್ಚಿನ ಮಹತ್ವ ಪಡೆಯುತ್ತಿದೆ.

ಜಿಎನ್ಡಿ ಎಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಅಂತಿಮ ವರ್ಷದ ಪ್ರೊಜೆಕ್ಟ್ ವರ್ಕ್ ಅಡಿ ಪ್ರೊ. ವಿನಯಕುಮಾರ ಅವರ ಮಾರ್ಗದರ್ಶನದಲ್ಲಿ ಈ ವಾಹನ ಸಿದ್ಧಪಡಿಸಿದ್ದಾರೆ. ವಾಹನವು ಸೌರಶಕ್ತಿ ಚಾಲಿತ ಬ್ಯಾಟರಿಯಿಂದ ಶಕ್ತಿ ಪಡೆದುಕೊಳ್ಳುತ್ತದೆ. ಇದಕ್ಕಾಗಿ ವಾಹನದಲ್ಲಿ ಸೋಲಾರ್ ಪೆನಲ್ ಹಾಗೂ ವಿಂಡ್ ಟರ್ಬೈನ್ ಅಳವಡಿಸಲಾಗಿದೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ. ಬಲಬೀರಸಿಂಗ್, ಕಾಲೇಜಿನ ಉಪಾಧ್ಯಕ್ಷೆ ರೇಷ್ಮಾ ಕೌರ್, ಪ್ರಾಚಾರ್ಯ ಡಾ. ರವೀಂದ್ರ ಎಕಲಾರಕರ್, ಶೈಕ್ಷಣಿಕ ನಿರ್ದೇಶಕ ಡಾ.ಬಿಎಸ್ ಧಾಲಿವಾಲ್, ವಿಭಾಗ ಮುಖ್ಯಸ್ಥ ಡಾ. ನೀಲಶೆಟ್ಟಿ ಕೆ. ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT